ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಉದ್ಯಮಿ ನೀರವ್‌ ಮೋದಿ, ಮೆಹುಲ್ ಚೋಕ್ಸಿಗೆ ಇಡಿ ಸಮನ್ಸ್ ಜಾರಿ

ಮುಂಬೈ :ಫೆ-16: ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ಗೆ 11,400 ಕೋಟಿ ರೂ.ವಂಚಿಸಿರುವ ಪ್ರಕರಣದಲ್ಲಿ ಮುಖ್ಯ ಆರೋಪಿ ಉದ್ಯಮಿ ನೀರವ್‌ ಮೋದಿ ಮತ್ತು ಅವರ ಉದ್ಯಮ ಪಾಲುದಾರ ಮೆಹುಲ್‌ ಚೋಕ್ಸಿ ಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ಜಾರಿ ಮಾಡಿದೆ.

ಹಣ ಅಕ್ರಮ ಕಾಯಿದೆಯಡಿ ನೀರವ್‌ ಮೋದಿ ಮತ್ತು ಚೋಕ್ಸಿ ಅವರಿಗೆ ಸಮನ್ಸ್‌ ಜಾರಿ ಮಾಡಲಾಗಿದ್ದು ಅವರು ವಾರದೊಳಗೆ ಸಾಕ್ಷ್ಯ ನುಡಿಯಬೇಕು ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಸಮನ್ಸ್‌ ನೊಟೀಸನ್ನು ಈ ಇಬ್ಬರು ಉದ್ಯಮಿಗಳ ಸಂಸ್ಥೆಗಳ ನಿರ್ದೇಶಕರಿಗೆ ತಲುಪಿಸಲಾಗಿದೆ.

ನೀರವ್‌ ಮೋದಿ ಅವರು ತಮ್ಮದೇ ಹೆಸರಿನಲ್ಲಿ ಚಿನ್ನಾಭರಣಗಳ ಬ್ರಾಂಡ್‌ ಸರಣಿ ಮಳಿಗೆಗಳನ್ನು ನಡೆಸುತ್ತಿದ್ದಾರೆ; ಚೋಕ್ಸೀ ಅವರು ಗೀತಾಂಜಲಿ ಜೆಮ್ಸ್‌ನ ಪ್ರಮೋಟರ್‌ ಆಗಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕಿನ ದೂರಿನ ಮೇರೆಗೆ ಸಿಬಿಐ ದಾಖಲಿಸಿದ ಎಫ್ಐಆರ್ ಆಧಾರದ ಮೇಲೆ ಇಬ್ಬರ ವಿರುದ್ಧವೂ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ಕೇಸು ದಾಖಲಿಸಿದೆ.

PNB fraud case, Nirav Modi, Mehul Choksi, Enforcement directorate, Summons

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ