ನವದೆಹಲಿ:ಆ-೩: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನೀರವ್ ಮೋದಿಯನ್ನು ಗಡಿಪಾರು ಮಾಡುವಂತೆ ಬ್ರಿಟನ್ ಸರ್ಕಾರಕ್ಕೆ ಭಾರತ ಅರ್ಜಿ ಸಲ್ಲಿಕೆ ಮಾಡಿದೆ.
ಈ ಕುರಿತು ರಾಜ್ಯಸಭೆಗೆ ಮಾಹಿತಿ ನೀಡಿದ ದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ ಕೆ ಸಿಂಗ್, ಅರ್ಥಿಕ ಅಪರಾಧಿ ನೀರವ್ ಮೋದಿಯ ಗಡೀಪಾರಿಗೆ ಕೋರಿ ಬ್ರಿಟನ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ನೀರವ್ ಮೋದಿಯನ್ನು ಗಡಿಪಾರು ಮಾಡುವಂತೆ ಕೋರಿರುವ ಅರ್ಜಿಯನ್ನು ಗೃಹ ಇಲಾಖೆಯಿಂದ ವಿದೇಶಾಂಗ ಇಲಾಖೆಗೆ ಕಳುಹಿಸಿಕೊಡಲಾಗಿದ್ದು, ಬ್ರಿಟನ್ ನಿಂದ ನೀರವ್ ಮೋದಿಯನ್ನು ಗಡಿಪಾರು ಮಾಡಲು ಮನವಿ ಮಾಡಲಾಗಿದೆ. ಇದೇ ವಿಚಾರವಾಗಿ ಮುಂದಿನ ಪ್ರಕ್ರಿಯೆಗಳನ್ನು ನಡೆಸಿಕೊಂಡಲು ಬ್ರಿಟನ್ ಸರಕಾರಕ್ಕೆ ಈ ಮನವಿಯನ್ನು ರಾಯಭಾರ ಕಚೇರಿ ಮೂಲಕ ಕಳುಹಿಸಿಕೊಡಲಾಗಿದೆ ಎಂದು ಹೇಳಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,500 ಕೋಟಿ ರೂ.ವಂಚನೆ ಎಸಗಿರುವ ಆರೋಪ ಎದುರಿಸುತ್ತಿರುವ ನೀರವ್ ಮೋದಿ ಒಬ್ಬ ವಜ್ರದ ವ್ಯಾಪಾರಿಯಾಗಿದ್ದು, ಆತನ ಸಹೋದರ ಸಂಬಂಧಿ ಮೇಹುಲ್ ಚೋಕ್ಸಿಯೊಂದಿಗೆ ಭಾರತದ ಮೋಸ್ಟ್ ವಾಂಟೆಡ್ ಅಪರಾಧಿಗಳಲ್ಲಿ ಒಬ್ಬನಾಗಿದ್ದಾನೆ. ನೀರವ್ ನ ಪಾಸ್‌ಪೋರ್ಟ್‌ಅನ್ನು ವಿದೇಶಾಂಗ ಇಲಾಖೆ ವಜಾ ಮಾಡಿದೆ ಎಂದು ಸಿಂಗ್ ಇದೇ ವೇಳೆ ತಿಳಿಸಿದ್ದಾರೆ.
India seeks Nirav Modi’s extradition from UK govt in PNB fraud case