ಯೋಧನ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಗಲ್ಫ್ ಉದ್ಯೋಗ ತೊರೆದು ಸೇನೆಗೆ ಸೇರುತ್ತಿದ್ದಾರೆ ಯುವಕರು

ಶ್ರೀನಗರ:ಆ-೩: ಹುತಾತ್ಮ ಯೋಧ ಔರಂಗಜೇಬ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿರುವ ಕಾಶ್ಮೀರಿ ಯುವಕರು ವಿಭಿನ್ನ ಮಾರ್ಗ ಅನುಸರಿಸುತ್ತಿದ್ದಾರೆ. ವಿವಿಧ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಸ್ಥರಾಗಿರುವ ಈ ಯುವಕರು ತಮ್ಮ ತಮ್ಮ ಉದ್ಯೋಗ ಬಿಟ್ಟು ಈಗ ಭಾರತೀಯ ಸೇನೆಗೆ ಸೇರುತ್ತಿದ್ದಾರೆಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಭಾರತೀಯ ಹುತಾತ್ಮ ಯೋಧ ಔರಂಗಜೇಬ್ ನಿವಾಸದ ಮಂದಾರ್ ಗ್ರಾಮದ ಸುಮಾರು 50 ಮಂದಿ ಯುವಕರು ಗಲ್ಫ್ ರಾಷ್ಟ್ರಗಳಲ್ಲಿ ವಿವಿಧ ಉದ್ಯೋಗಳಲ್ಲಿ ಇದ್ದರು. ಈಗ ಈ ಎಲ್ಲಾ ಯುವಕರು ತಮ್ಮ ಉದ್ಯೋಗಗಳನ್ನು ಶಾಶ್ವತವಾಗಿ ತೊರೆದು ಸ್ವಗ್ರಾಮಕ್ಕೆ ಮರಳಿ ಭಾರತೀಯ ಸೇನೆ ಸೇರಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಯೋಧ ಔರಂಗಜೇಬ್ ಆಪ್ತ ಸ್ನೇಹಿತರು ಎಂದು ಹೇಳಲಾಗುತ್ತಿರುವ ಮಹಮದ್ ಕಿರಾಮತ್, ಮಹಮದ್ ತಾಜ್ ಸೇರಿದಂತೆ ಸುಮಾರು 50 ಮಂದಿ ಮೆಂದಾರ್ ನ ಸಲಾನಿ ಗ್ರಾಮದ ಯುವಕರು ಸೇನೆಗೆ ಸೇರುತ್ತಿದ್ದಾರೆ.

ಖಾಸಗಿ ಮಾಧ್ಯಮದ ವರದಿ ಪ್ರಕಾರ ಜೂನ್ 14ರಂದು ಔರಂಗಜೇಬ್ ಹತ್ಯೆ ವಿಚಾರ ತಿಳಿದ ಕೂಡಲೇ ಸ್ನೇಹಿತರು ಕಾಶ್ಮೀರಕ್ಕೆ ಮರಳಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅಂತ್ಯಕ್ರಿಯೆ ಸಂದರ್ಭದಲ್ಲೇ ತಮ್ಮ ಸ್ನೇಹಿತನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಶಪಥ ಮಾಡಿದ್ದರಂತೆ. ಈ ಬಗ್ಗೆ ಮಾತನಾಡಿರುವ ಔರಂಗಜೇಬ್ ಸ್ನೇಹಿತರಲ್ಲಿ ಒಬ್ಬರಾಗಿರುವ ಮಹಮದ್ ಕಿರಾಮತ್ ಅವರು, ನಮ್ಮ ಸ್ನೇಹಿತ ಕೊಲೆಯಾದ ವಿಚಾರ ಕೇಳಿ ನಿಜಕ್ಕೂ ನಾವು ಆಘಾತಕ್ಕೊಳಗಾದೆವು. ಕೂಡಲೇ ಸ್ವಗ್ರಾಮಕ್ಕೆ ತೆರಳಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡೆವು. ಅಂದೇ ನಾವು ಭಾರತೀಯ ಸೇನೆ ಸೇರಲು ನಿರ್ಧರಿಸಿದೆವು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಗಲ್ಫ್ ಉದ್ಯೋಗದಿಂದ ಬಿಡುವು ದೊರೆಯಲಿಲ್ಲ. ಇದೀಗ ನಮ್ಮ ಎಲ್ಲ ಕೆಲಸಗಳನ್ನೂ ಪೂರ್ಣ ಮಾಡಿದ್ದು. ಶಾಶ್ವತವಾಗಿ ಕಾಶ್ಮೀರದಲ್ಲೇ ನೆಲೆಸಲು ಸಿದ್ಧವಾಗಿದ್ದೇವೆ. ನಾವೂ ಕೂಡ ಔರಂಗಜೇಬ್ ನಂತೆ ಸೇನೆ ಸೇರುತ್ತಿದ್ದೇವೆ. ನಮ್ಮಂತೆ ಸುಮಾರು 50 ಮಂದಿ ಯುವಕರು ಒಟ್ಟುಗೂಡಿದ್ದು, ಎಲ್ಲರೂ ಸೇನೆ ಸೇರುತ್ತಿದ್ದೇವೆ. ನಮ್ಮ ಗುರಿಯೊಂದೇ ಅದು ಔರಂಗಜೇಬ್ ಹಂತಕರನ್ನು ಬೇಟೆಯಾಡುವುದು. ಖಂಡಿತಾ ಉಗ್ರರರನ್ನು ಹುಡುಕಿ ಸೆದೆ ಬಡಿಯುತ್ತೇವೆ ಎಂದು ಹೇಳಿದ್ದಾರೆ.
To Avenge Armyman Aurangzeb’s Murder, 50 Villagers Return From The Gulf

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ