ಬೆಂಗಳೂರು: ಕನ್ನಡ ಮನರಂಜನೆ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ವಾರಸ್ದಾರ ಚಿತ್ರೀಕರಣ ಸಂದರ್ಭದಲ್ಲಿ ಬಳಸಿದ ತಮ್ಮ ಮನೆ ಮತ್ತು ಕಾಫಿ ಎಸ್ಟೇಟ್ ಗೆ ನಿಗದಿಪಡಿಸಿದ್ದ ಹಣ ನೀಡದೆ ಚಿತ್ರೀಕರಣ ತಂಡ ವಂಚಿಸಿದೆ ಎಂದು ನಟ ಕಿಚ್ಚ ಸುದೀಪ್ ವಿರುದ್ಧ ಎಸ್ಟೇಟ್ ಮಾಲಿಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರಿಗೆ ದೂರು ನೀಡಿದ್ದಾರೆ.ಕೆಲ ಸಮಯಗಳ ಹಿಂದೆ ಖಾಸಗಿ ಮನರಂಜನೆ ವಾಹಿನಿಯಲ್ಲಿ ವಾರಸ್ದಾರ ಎಂಬ ಧಾರವಾಹಿ ಪ್ರಸಾರವಾಗುತ್ತಿತ್ತು. ಅದನ್ನು ನಟ ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ ನಿರ್ಮಾಣ ಮಾಡಲಾಗಿತ್ತು. ಕೆಲ ಸಮಯಗಳವರೆಗೆ ಪ್ರಸಾರವಾಗಿ ನಂತರ ಯಶಸ್ಸು ಕಾಣದೆ ಧಾರವಾಹಿ ನಿಂತು ಹೋಗಿತ್ತು. ಇದರ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿನ ದೀಪಕ್ ಮಯೂರ್ ಪಟೇಲ್ ಎಂಬುವವರ ಮನೆ ಮತ್ತು ಕಾಫಿ ತೋಟವನ್ನು ಬಾಡಿಗೆಗೆ ತಂಡ ಪಡೆದಿತ್ತು.ಧಾರವಾಹಿ ಸಂದರ್ಭದಲ್ಲಿ ಕಾಫಿ ತೋಟ ಸಾಕಷ್ಟು ಹಾನಿಗೀಡಾಗಿವೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಮುಖ್ಯಮಂತ್ರಿಗಳಿಗೆ ಮಾಲಿಕ ದೀಪಕ್ ಮಯೂರ್ ದೂರು ನೀಡಿದ್ದಾರೆ. ಧಾರವಾಹಿಗೆಂದು ಪಡೆದ ಮನೆ ಮತ್ತು ತೋಟಕ್ಕೆ ಮಾಡಿಕೊಂಡ ಒಪ್ಪಂದದಂತೆ ಹಣ ನೀಡದೆ ನಿರ್ಮಾಣ ತಂಡ ತಮಗೆ ಅನ್ಯಾಯ ಮಾಡಿದೆ. ಧಾರವಾಹಿ ನಿಂತುಹೋದ ನಂತರ ತಾವು ಹಣ ಕೇಳಿದಾಗ ನೀಡುತ್ತಿಲ್ಲ. ಕಾಫಿ ತೋಟ ಕೂಡ ಸಾಕಷ್ಟು ಹಾನಿಗೀಡಾಗಿದೆ. ಈ ಬಗ್ಗೆ ನ್ಯಾಯ ಕೊಡಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಇನ್ನು ಈ ವಿಷಯ ನಟ ಕಿಚ್ಚ ಸುದೀಪ್ ಅವರ ಗಮನಕ್ಕೆ ಬಂದಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಏನು ಕ್ರಮ ಕೈಗೊಳ್ಳಿದೆ ಎಂದು ನೋಡಬೇಕಿದೆ.
Related Articles
ಸುದೀಪ್ ಲವ್ ಸಾಂಗ್ ಗೆ ಪ್ರೇಮ್ ಧ್ವನಿ
Seen By: 123 ದ ವಿಲನ್ ಚಿತ್ರದ ಹಾಡುಗಳು ಸದ್ದು ಮಾಡುತ್ತಿವೆ. ಚಿತ್ರದ ಮೂರನೇ ಹಾಡು 4 ರಂದು ಬಿಡುಗಡೆಯಾಗುತ್ತಿದೆ. ಸುದೀಪ್ ಮತ್ತು ಆಮಿ ಜಾಕ್ಸನ್ ನೃತ್ಯಕ್ಕೆ [more]
ಎಚ್ಡಿಕೆ ಮನೆಗೆ ಕಿಚ್ಚ ಭೇಟಿ; 2 ತಾಸು ಚರ್ಚೆ, ಜೆಡಿಎಸ್ ಸೇರ್ತಾರಾ ನಟ ಸುದೀಪ್?
April 2, 2018
Samachar Network
ರಾಜಕೀಯ, ಮನರಂಜನೆ
Comments Off on ಎಚ್ಡಿಕೆ ಮನೆಗೆ ಕಿಚ್ಚ ಭೇಟಿ; 2 ತಾಸು ಚರ್ಚೆ, ಜೆಡಿಎಸ್ ಸೇರ್ತಾರಾ ನಟ ಸುದೀಪ್?
Seen By: 63 ಬೆಂಗಳೂರು:ಏ-2: ಚಿತ್ರ ನಟ ಕಿಚ್ಚ ಸುದೀಪ್ ಇಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರ ಮನೆಗೆ ತೆರಳಿ ಕುಮಾರಸ್ವಾಮಿ [more]
ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡುವೆ: ನಟ ಕಿಚ್ಚ ಸುದೀಪ್
May 4, 2018
Samachar Network-CLB
ರಾಜ್ಯ, ರಾಷ್ಟ್ರೀಯ, ರಾಜಕೀಯ, ಮನರಂಜನೆ
Comments Off on ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡುವೆ: ನಟ ಕಿಚ್ಚ ಸುದೀಪ್
Seen By: 92 ಬೆಂಗಳೂರು:ಮೇ-4: ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಚುನಾವಣಾ ಪ್ರಚಾರ ನಡೆಸಲಿರುವ ನಟ ಕಿಚ್ಚಾ ಸುದೀಪ್, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ. ಈ [more]