ಲಂಡನ್: ಇಂಗ್ಲೆಂಡ್ ನೆಲದಲ್ಲಿ ಆಡುವಾಗ ತಾಳ್ಮೆ ಮತ್ತು ಸಹನೆ ನಿರ್ಣಾಯಕ ಪಾತ್ರವಹಿಸುತ್ತದೆ ಎಂದು ಟೀಂ ಇಂಡಿಯಾದ ಉಪನಾಯಕ ಅಜಿಂಕ್ಯಾ ರಹಾನೆ ಹೇಳಿದ್ದಾರೆ.
ಲಂಡನ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಹಾನೆ, ಇಂಗ್ಲೆಂಡ್ ನೆಲದಲ್ಲಿ ಖಂಡಿತಾ ಭಾರತೀಯ ಬ್ಯಾಟ್ಸಮನ್ ಗಳ ತಾಳ್ಮೆ ಪರೀಕ್ಷೆಯಾಗಲಿದೆ. ಇಲ್ಲಿ ಆಡುವಾಗ ಬ್ಯಾಟ್ಸಮನ್ ಗೆ ಸಹನೆ ತಾಳ್ಮೆ ಅಗತ್ಯವಾಗುತ್ತದೆ. ಫಲಿತಾಂಶದ ಬಗ್ಗೆ ಚಿಂತೆ ಮಾಡುವುಕ್ಕಿಂತ ಉತ್ತಮ ಪ್ರದರ್ಶನದ ಮೇಲೆ ನಾವು ಗಮನ ಕೇಂದ್ರೀಕರಿಸಬೇಕು. ಉತ್ತಮ ಪ್ರದರ್ಶನವೊಂದೇ ಗೆಲುವು ತಂದುಕೊಡಲಿದೆ ಎಂದು ಹೇಳಿದರು.
ನಾಲ್ಕು ವರ್ಷಗಳ ಹಿಂದೆ ನಾವು ಧೋನಿ ನಾಯಕತ್ವದಲ್ಲಿ ಇಲ್ಲಿಗೆ ಬಂದಿದ್ದಾಗ ಸಾಕಷ್ಟು ವಿಭಾಗಗಳಲ್ಲಿ ನಾವು ಎಡವಿದ್ದೆವು. ಆದರೆ ಹಾಲಿ ತಂಡ ಎಲ್ಲ ವಿಭಾಗಗಳಲ್ಲೂ ಉತ್ತಮವಾಗಿದೆ. ಯಾವುದೇ ರೀತಿಯ ನಕಾರಾತ್ಮಕ ಪರಿಸ್ಥಿತಿಯನ್ನು ಬುಡಮೇಲು ಮಾಡಬಲ್ಲ ಸಾಮರ್ಥ್ಯ ಹಾಲಿ ತಂಡಕ್ಕಿದೆ. ಆದರೆ ಪಂದ್ಯದಲ್ಲಿ ಹವಾಮಾನ ಕೂಡ ಪ್ರಮುಖ ಪಾತ್ರವಹಿಸಲಿದ್ದು, ವಾತಾವರಣದ ಮೇಲೆ ಬ್ಯಾಟ್ಸಮನ್ ಪ್ರದರ್ಶನ ಆಧಾರವಾಗಿರುತ್ತದೆ ಎಂದು ರಹಾನೆ ಹೇಳಿದರು.
ಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದ್ದು, ಏಕದಿನ ಸರಣಿಯನ್ನು 2-1 ಸೋತಿದ್ದ ಭಾರತ ಈ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಸರಣಿ ಗೆಲುವಿನೊಂದಿಗೆ ದೀರ್ಘಕಾಲದ ಪ್ರವಾಸವನ್ನು ಅಂತ್ಯಗೊಳಿಸಲು ಹವಣಿಸುತ್ತಿದೆ.