ಕುಲ್‌ದೀಪ್ ಬೌಲಿಂಗ್‌ಗೆ ಹೆದರಿದ ಆಂಗ್ಲರು ಏನು ಮಾಡಿದರು ಗೊತ್ತಾ!

ಬರ್ಮಿಂಗ್ಹ್ಯಾಮ್: ಟಿ20 ಹಾಗೂ ಏಕದಿನ ಸರಣಿಯ ಪಂದ್ಯಗಳಲ್ಲಿ ಆಂಗ್ಲರ ನಿದ್ದೆಗೆಡಿಸಿದ್ದ ಚೈನಾಮನ್ ಖ್ಯಾತಿಯ ಸ್ಪಿನ್ನರ್ ಕುಲ್‌ದೀಪ್ ಯಾದವ್ ಟೆಸ್ಟ್ ತಂಡಲ್ಲೂ ಸ್ಥಾನ ಗಿಟ್ಟಿಸಿಕೊಂಡಿರುವುದು ಆಂಗ್ಲರಿಗೆ ಬಿಸಿ ತುಪ್ಪವಾಗಿದೆ.
ಇಂಗ್ಲೆಂಡ್ ವಿರುದ್ಧದ ಮೂರು ಟಿ20 ಪಂದ್ಯ ಹಾಗೂ 3 ಏಕದಿನ ಪಂದ್ಯಗಳು ಸೇರಿದಂತೆ ಒಟ್ಟಾರೆ 6 ಪಂದ್ಯಗಳಲ್ಲಿ ಕುಲ್ದೀಪ್ 14 ವಿಕೆಟ್ ಪಡೆದಿದ್ದರು. ಇದೀಗ ಟೆಸ್ಟ್ ಪಂದ್ಯದಲ್ಲೂ ಕುಲ್‌ದೀಪ್ ಆಡುತ್ತಿರುವುದು ಇಂಗ್ಲೆಂಡ್ ಪಡೆ ಕಂಗೆಡಲು ಕಾರಣವಾಗಿದೆ. ಇನ್ನು ಕುಲ್‌ದೀಪ್ ಬೌಲಿಂಗ್ ಅನ್ನು ಹೆದರಿಸಲು ಆಂಗ್ಲರು ರಿಸ್ಟ್ ಸ್ಪಿನ್ ಬೌಲರ್ ಗಳ ಮೊರೆ ಹೋಗಿದ್ದಾರೆ.
ನಾಳೆಯಿಂದ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗುತ್ತಿದ್ದು ನಿನ್ನೆ ಕಠಿಣ ಅಭ್ಯಾಸ ನಡೆಸಿದ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಎಡಗೈ ರಿಸ್ಟ್ ಸ್ಪಿನ್ನರ್ ಗಳಾದ ಸಮಿತ್ ಪಟೇಲ್ ಸಹೋದರ ಅಖಿಲ್ ಪಟೇಲ್, ವಿಲಿಯಮ್ ಬ್ಲಾಕ್ ವೆಲ್, ಸ್ಯಾಮ್ ವಿಸ್ನಿಯೆವ್ಸ್ಕಿ ಅವರಿಂದ ನೆಟ್ ನಲ್ಲಿ ಬೌಲಿಂಗ್ ಮಾಡಿಕೊಂಡು ಅಭ್ಯಾಸ ಮಾಡಿದ್ದಾರೆ.
ಮುನ್ನೆಚ್ಚರಿಗೆ ಕ್ರಮವಾಗಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಕುಲ್‌ದೀಪ್ ಬೌಲಿಂಗ್ ಎದುರಿಸಲು ತಯಾರಿ ನಡೆಸಿದ್ದಾರೆ. ಆದರೆ ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗದಲ್ಲಿ ಕುಲ್‌ದೀಪ್ ಯಾದವ್ ಗೆ ಸ್ಥಾನ ಸಿಗುತ್ತದೆಯೇ ಎಂಬುದೇ ಇನ್ನು ಅಂತಿಮವಾಗಿಲ್ಲ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ