ಮಲಬದ್ದತೆ ತಡೆಗಟ್ಟಲು ಮನೆ ಮದ್ದು ಮತ್ತು ಯೋಗಾಭ್ಯಾಸ

ಬಹಳಷ್ಠು ಜನರಲ್ಲಿ ಕಾಡುವ ಸಾಮಾನ್ಯ ಹಾಗು ಗಂಭೀರವಾದ ಸಮಸ್ಯಯೆಂದರೆ ಮಲಬದ್ಧತೆ ಅಥವ ಕಾನ್ಸ್ಟಿಪೇಶನ್. ಯಾವಾಗ ವ್ಯಕ್ತಿಯು ಸರಿಯಾದ ಸಮಯದಲ್ಲಿ ಮಲವಿಸರ್ಜನೆ ಮಾಡುವುದಿಲ್ಲವೂ ಅಥವ 1 ವಾರದಲ್ಲಿ 4 ಭಾರಿಗಿಂತಲೂ ಕಡಿಮೆ ಮಲವಿಸರ್ಜಿಸಿದಲ್ಲಿ ಅಥವ ವಿಸರ್ಜಿಸುವಂತಹ ಮಲವು ಅತಿ ಗಟ್ಟಿಯಾಗಿದ್ದಲ್ಲಿ ಅಂತಹ ವ್ಯಕ್ತಿಯನ್ನು ಮಲಬದ್ಧತೆಯಿಂದ ಬರಳುತ್ತಿದ್ದಾನೆ ಎಂದು ಕರೆಯುತ್ತೇವೆ.

ಮಲಬದ್ಧತೆಯಿಂದ ಬಳಲುತ್ತಿರುವ ರೋಗಿಯು ಮಲವಿಸರ್ಜನೆ ಮಾಡಲು ಇಚ್ಚಿಸಿದರೂ, ಸುಲಭವಾಗಿ ವಿಸರ್ಜಿಸಲು ಸಾಧ್ಯವಾಗದಿರುವ ಕಾರಣ ಅಥವ ಅತಿ ಒತ್ತಡ/ಮುಕ್ಕುವ ಅಭ್ಯಾಸದಿಂದ ವಿಸರ್ಜಸುವ ಬೇಕಾಗುವ ಕಾರಣದಿಂದ ರೋಗಿಗೆ ಹೆಚ್ಚು ಕಿರಿಕಿರಿಯುಂಟಾಗುತ್ತದೆ. ಈ ಸಮಸ್ಯಗೆ ಸುಲಭವಾಗಿ ಮನೆಯಲ್ಲೇ ಸಿಗುವ ಹಲವು ವಸ್ತುಗಳಿಂದ ಪರಿಹಾರವನ್ನು ಕಂಡುಕೂಳ್ಳಬಹುದು.

ನಾವು ನಮ್ಮ ಹಿಂದಿನ ಲೇಖನದಲ್ಲಿ ಮಲಬದ್ಧತೆಗೆ ಕಾರಣಗಳು ಏನೇನು ಎಂದು ಚರ್ಚಿಸಿದ್ದೆವು. ಈ ಲೇಖನದಲ್ಲಿ ಅದರಿಂದ ತಡೆಗಟ್ಟಲು ಏನು ಮಾಡಬೇಕು ಎಂದು ವಿಚಾರ ಮಾಡೋಣ

 

ಮಲಬದ್ದತೆಗೆ ಮದ್ದು –

1. ಹೆಚ್ಚು ನಾರಿನ ಅಂಶ (ಫೈಭರ್ ಅಂಶ) ಉಳ್ಳ ಹಣ್ಣುಗಳಾದ ಸೇಬು, ಕಿತ್ತಲೆ, ಬಾಳೆ ಹಣ್ಣಿನ ಸೇವನೆಯಿಂದ ಸುಲಭವಾಗಿ ಮಲಬದ್ಧತೆ ಸಂಭವಿಸದ ಹಾಗೆ ತಡೆಗಟ್ಟಬಹುದು.

2. ಹೆಚ್ಚು ಫೈಬರ್ ಉಳ್ಳ ತರಕಾರಿಗಳಾದ ಕ್ಯಾರೆಟ್, ಎಲೆಕೋಸು, ಬೀಟ್ರೋಟ್, ಗೆಡ್ಡೆಕೂಸು. ಮುಲಂಗಿಯ ಸೇವನೆಯಿಂದ ಮಲಬದ್ಧತೆ ನಿವಾರನೆಯಾಗುತ್ತದೆ.

3. ಫ್ಲ್ಯಾಕ್ ಸೀಡ್ಸ್ 1 ಚಮಚ ಬೆಳಗ್ಗೆ ಬಿಸಿನೀರಿನಲ್ಲಿ ಹಾಗು ರಾತ್ರಿ ಮಲಗುವ ಮೂದಲು 1 ಚಮಚ ಬಿಸಿ ನೀರಿನಲ್ಲಿ ಸೇವನೆ ಮಾಡುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

4. ಬೆಳಗ್ಗೆ ಎದ್ದಕೂಡಲೆ 7-8 ಲೋಟ ಬೆಚ್ಚಗಿರುವ ನೀರನ್ನು ಸೇವನೆ ಮಾಡುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

5. 1-3 ವರ್ಷದ ಮಕ್ಕಳಲ್ಲಿ ಮಲಬದ್ಧತೆ ಕಂಡು ಬಂದಿದಲ್ಲಿ 4-5 ಬಿಂದು ಹರಳೆಣ್ಣೆಯನ್ನು ಹೊಕ್ಕುಳಿಗೆ ರಾತ್ರಿ ಸಮಯ ಹಚ್ಚುವುದರಿಂದ, ಬೆಳಗ್ಗೆ ಮಲವಿಸರ್ಜನೆ ಮಾಡಲು ಮಕ್ಕಳಿಗೆ ಅನುಕೂಲವಾಗುತ್ತದೆ.

6. ರಾತ್ರಿ ಮಲಗುವ ಮೂದಲು, ಬಿಸಿ ಹಾಲಿಗೆ 2 ಚಮಚ ತುಪ್ಪ ಸೇರಿಸಿ ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

7. 300 ಎಮ್. ಎಲ್ ಬಿಸಿ ನೀರಿನೂಂದಿಗೆ, 1/2 ಚಮಚ ಹರಳೆಣ್ಣೆಯನ್ನು ಮಿಶ್ರಿಸಿ, ರಾತ್ರಿ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

8. 15-20 ಒಣ ದ್ರಾಕ್ಷಿಯನ್ನು, 1/2 ಚಮಚ ಜೀರಿಗೆಯೊಂದಿಗೆ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

9. 250 ಎಮ್.ಎಲ್ ನೀರಿಗೆ, 15 ಎಮ್.ಎಲ್ ಬೆಟ್ಟದ ನೆಲ್ಲಿಕಾಯಿಯ ರಸವನ್ನು(ಆಮ್ಲ ಜ್ಯೂಸ್) ಸೇರಿಸಿ ಬೆಳಗ್ಗೆ ಖಾಲಿ ಹೂಟ್ಟೆಯಲ್ಲಿ ಸೇವಿಸುವುದರಿಂದ ಮಲಬದ್ಧತೆ ನಿವಾರಿಸಲು ಉಪಯೋಗಕಾರಿಯಾಗುತ್ತದೆ.

10. 1/2 ಚಮಚ ತ್ರಿಫಲ ಚೂರ್ಣವನ್ನು ,1 ಲೋಟ ಬಿಸಿನೀರಿನಲ್ಲಿ ರಾತ್ರಿ ಮಲಗುವ ಮೂದಲು ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

ಮಲಬದ್ಧತೆ ತಡೆಯಲು ಮಾಡಬೇಕಾದ ಯೋಗಾಸನಳ ವಿವರ-

ಪವನ ಮುಕ್ತಾಸನ
ಮಾಲಾಸನ
ಏಕಪಾದ ಪ್ರಸರಣಾಸನ
ಸುಪ್ತ ಮತ್ಸೇಂದ್ರಿಯಾಸನ
ಬಾಲಾಸನ ಹಾಗು
ಹಾಲಾಸನ
ಷಡಂಗಾಸನ ಮಲಬದ್ಧತೆಯನ್ನು ತಡೆಯಲು ಅನುಕೂಲಕಾರಿ

 

ಮಲಬದ್ಧತೆ ತಡೆಯಲು ಅನುಸರಿಸಬೇಕಾದ ಪ್ರಾಣಾಯಾಮ

ಕಪಾಲಭಾತಿ ಹಾಗು ಅಗ್ನಿಸಾರ್ ಪ್ರಣಾಯಾಮ ಮಲಬದ್ಧತೆಯನ್ನು ತಡೆಯಲು ಅನುಕೂಲಕಾರಿ.

 

ಲೇಖಕರು
ಡಾ|| ಸಿಂಧು ಪ್ರಶಾಂತ್
ಬಿ.ಎ.ಎಮ್.ಎಸ್, ಎಮ್.ಡಿ(ಆಲ್ಟರ್ ನೇಟಿವ್ ಮೆಡಿಸನ್), ಎಮ್.ಎಸ್ಸಿ(ಯೋಗ)
ದೂರವಾಣಿ- 9743857575

ಡಾ|| ಸಿಂಧು ಅವರು ಗರ್ಭಿಣಿಯರೆಗೆ ಯೋಗದ ಮಹತ್ವ ಹಾಗು ಹೇಗೆ ಯೋಗವನ್ನು ಮಾಡಬೇಕೆಂದು ತರಬೇತಿಯನ್ನು ಸ್ಕೈಪ್ ಮುಕಾ0ತರ ಹಲವಾರು ಸ್ತ್ರೀಯರಿಗೆ ಹೇಳಿಕೂಡುತ್ತಿದ್ದಾರೆ. ಅತಿ ಶೀಘ್ರದಲ್ಲಿ ಗರ್ಭಿಣಿಯರಿಗಾಗಿ ಯೋಗ ಹಾಗು ಪ್ರಾಣಾಯಾಮವನ್ನು ಕುರಿತು ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಡಾ|| ಸಿಂಧು ಪ್ರಶಾಂತ್ ರವರು ಬಹುಮುಖ ಪ್ರತಿಭಾವಂತರು.”ನೃತ್ಯ ಪ್ರಾರ್ಥನ ” ಎಂಬ ಸಂಸ್ಥೆಯ ಸ್ಥಾಪಕಿ ಹಾಗು ಶಕ್ಷಕಿಯಾಗಿ ಹಲವಾರು ಶಿಶ್ಯವೃಂದವನ್ನು ತಯಾರಿಸುತಿರುವ ಹೇಗಳಿಕೇ ಇವರದು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ