ಮಲಬದ್ಧತೆ(ಕಾನ್ಸ್ಟಿಪೇಶನ್) ಗೆ ಕಾರಣಗಳು ಏನು?

ಬಹಳಷ್ಟು ಜನರಲ್ಲಿ ಬೆಳಗ್ಗೆ ಎದ್ದ ಕೂಡಲೆ ಕಾಡುವ ಸಾಮಾನ್ಯ ಹಾಗು ಗಂಭೀರ ಸಮಸ್ಯೆಯೆಂದರೆ ಮಲಬದ್ಧತೆ ಅಥವ ಕಾನ್ಸ್ಟಿಪೇಶನ್. ಯಾವಾಗ ವ್ಯಕ್ತಿಯು ಸೆರಿಯಾದ ಸಮಯದಲ್ಲಿ ಮಲವಿಸರ್ಜನೆ ಮಾಡುವುದಿಲ್ಲ ಅಥವ 1 ವಾರದಲ್ಲಿ 4 ಭಾರಿಗಿಂತಲು ಕಡಿಮೆ ಮಲ ವಿಸರ್ಜಿಸಿದ್ದಲ್ಲಿ ಅಥವ ವಿಸರ್ಜಿಸುವಂತಹ ಮಲವು ಅತಿ ಗಟ್ಟಿಯಾಗಿದ್ದಲ್ಲಿ ಅಂತಹ ವ್ಯಕ್ತಿಯನ್ನು ಮಲಬದ್ಧತೆಯಿಂದ ಬರಳುತ್ತಿದ್ದಾನೆ ಎಂದು ಕರೆಯುತ್ತೇವೆ.

ಮಲಬದ್ಧತೆಯಿಂದ ಬಳಲುತ್ತಿರುವ ರೋಗಿಯು ಮಲವಿಸರ್ಜನೆ ಮಾಡಲು ಇಚ್ಚಿಸಿದರೂ, ಸುಲಭವಾಗಿ ವಿಸರ್ಜಿಸಲು ಸಾಧ್ಯವಾಗದಿರುವ ಕಾರಣ ಅಥವ ಅತಿ ಒತ್ತಡ/ಮುಕ್ಕುವ ಅಭ್ಯಾಸದಿಂದ ವಿಸರ್ಜಿಸ ಬೇಕಾಗುವ ಕಾರಣದಿಂದ ರೋಗಿಗೆ ಹೆಚ್ಚು ಕಿರಿಕಿರಿಯುಂಟಾಗುತ್ತದೆ.

ಮಲಬದ್ಧತೆಯಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣಗಳೆಂದರೆ-

  • ಹೂಟ್ಟೆನೋವು
  • ಹೂಟ್ಟೆ ಉಬ್ಬರಿಕೆ
  • ಹೂಟ್ಟೆ ಭಾರವಾದಂತನ್ನಿಸುವುದು
  • ತಲೆನೋವು
  • ಹಸಿವು ಕಡಿಮೆಯಾಗುವುದು
  • ಬೆನ್ನು ನೋವು

ಮಲಬದ್ಧತೆ ಸಂಭವಿಸಲು ಕಾರಣಗಳೆಂದರೆ-

ಮಲಬದ್ಧತೆ ಸಂಭವಿಸಲು ಮುಖ್ಯ ಕಾರಣವೆಂದರೆ ರೋಗಿಯು ಸರಿಯಾದ ಆಹಾರ, ವಿಹಾರ ಕ್ರಮವನ್ನು ಅನುಸರಿಸದಿರುವುದು. ಮಲಬದ್ಧತೆ ನಿವಾರಿಸಲು ರೋಗಿಯು ಮೂದಲು ತಾನು ರೂಡಿಸಿಕೂಂಡಿರುವ ಆಹಾರ ವಿಹಾರದ ತಪ್ಪುಗಳನ್ನು ಸರಿಪಡಿಸಿಕೂಳ್ಳಬೇಕು.

1. ಸೇವಿಸುವಂತಹ ಆಹಾರದಲ್ಲಿ ನಾರಿನ ಅಂಶ(ಫೈಬರ್ ಅಂಶ)ಹೆಚ್ಚು ಇಲ್ಲದ ಕಾರಣದಿಂದಾಗಿ ಮಲವು ಸರಿಯಾಗಿ ತಯಾರಾಗದಿರುವುದರಿಂದ ಮಲಬದ್ಧತೆ ಉಂಟಾಗುತ್ತದೆ.

2. ಅತಿ ಕಡಿಮೆಯಾಗಿ ನೀರು ಸೇವಿಸುವುದರಿಂದ, ಪಚನ ಕ್ರಿಯೆಯು ಕಡಿಮೆಯಾಗುತ್ತದೆ. ಈ ಕಾರಣದಿಂದ ಮಲವು ಗಟ್ಟಿಯಾಗಿ, ಮಲಬದ್ಧತೆ ಉಂಟಾಗುತ್ತದೆ.

3. ಶರೀರಕ್ಕೆ ವ್ಯಾಯಾಮ ದೂರಕದ ಕಾರಣದಿಂದಾಗಿಯೂ ಸಹ ಮಲಬದ್ಧತೆ ಉಂಟಾಗುತ್ತದೆ. ವ್ಯಾಯಾಮ ಮಾಡುವುದರಿಂದ ಪಚನ ಕ್ರಿಯೆ ಹೆಚ್ಚಾಗಿ, ದೂಡ್ಡ ಕರುಳಿನಲ್ಲಿ ಸೇವಿಸಿದಂತಹ ಆಹಾರವು ಬೇಗ ಮಲವಾಗಿ ಮಾರ್ಪಾಟಾಗಿ, ವಿಸರ್ಜನೆಗೊಳ್ಳುತ್ತದೆ. ವ್ಯಾಯಾಮ ಮಾಡದೆ ಇದ್ದಲ್ಲಿ ಪಚನ ಕ್ರಿಯೆಯು ನಿಧಾನವಾಗುವುದರಿಂದ ದೂಡ್ಡ ಕರುಳಿನಲ್ಲಿ ಸೇವಿಸಿದಂತಹ ಆಹಾರ ಶೀರ್ಘವಾಗಿ ಮಲರೂಪವಾಗಿ ಮಾರ್ಪಾಟಾಗುವುದಿಲ್ಲ ಹಾಗು ಹೆಚ್ಚು ಸಮಯ ದೂಡ್ಡಕರುಳನಲ್ಲಿ ಶೇಖರಗೂಳ್ಳುವ ಕಾರಣದಿಂದ ಮಲವು ಗಟ್ಟಿಯಾಗಿ ಪರಿವರ್ತನೆಗೂಳ್ಳುತ್ತದೆ.

4. ತುಂಬ ಕಡಿಮೆ ಆಹಾರ ಸೇವಿಸುವುದರಿಂದಲೂ ಸಹ ಮಲಬದ್ಧತೆ ಉಂಟಾಗುತ್ತದೆ. ಕಡಿಮೆ ಆಹಾರ ಸೇವನೆಯಿಂದಾಗಿ ಸೇವಿಸಿದ ಆಹಾರಕ್ಕೆ ದೂಡ್ಡ ಕರಿಳಿನಲ್ಲಿ ಹೆಚ್ಚು ಒತ್ತಡ ಬೀಳದ ಕಾರಣದಿಂದ ಅದು ಅಲ್ಲಿಯೇ ಹೆಚ್ಚು ಸಮಯ ಶೇಖರಗೂಂಡಂತಾಗಿ ಮಲಬದ್ದತೆ ಉಂಟಾಗುತ್ತದೆ.

5. ಗರ್ಭವಸ್ಥೆಯ 1-4 ನೇ ತಿಂಗಳವರಿಗು, ಸೇವಿಸುವ ಆಹಾರದ ಪೌಷ್ಠಕಾಂಶವನ್ನು ಸಂಪೂರ್ಣವಾಗಿ ಕರಳುಗಳು ಹೀರಬೇಕಾದ ಕಾರಣದಿಂದ ಹಾಗು ಹೆಚ್ಚು ವಾಂತಿ ಇದ್ದಲ್ಲಿ ಆಹಾರದಲ್ಲಿ ನೀರಿನ ಅಂಶ ಕಡಿಮೆ ಇರುವ ಕಾರಣದಿಂದಾಗಿ ಮಲಬದ್ಧತೆ ಉಂಟಾಗುತ್ತದೆ.

6. ಹೆಚ್ಚು ಕಬ್ಬಿಣದ ಅಂಶವಿರುವ ಆಹಾರ ಸೇವನೆಯಿಂದಲೂ ಸಹ ಮಲಬದ್ಧತೆ ಉಂಟಾಗುತ್ತದೆ. ಕಬ್ಬಿಣದ ಅಂಶವಿರುವ ಆಹಾರ ಅಥವ ಔಷದದ ಸೇವನೆ ಇಂದಾಗಿ ಸಣ್ಣಕರುಳಿನ ಚಲನೆ(ಪೆರಿಸ್ಟಾಲಿಟಿಕ್ ಚಲನೆ) ಕಡಿಮೆಯಾಗುತ್ತದೆ ಹಾಗು ಆಹಾರದ ನೀರಿನಾಂಶವನ್ನು ಕರುಳುಗಳು ಹೆಚ್ಚು ಹೀರಿಕೂಳ್ಳುವ ಕಾರಣದಿಂದಾಗಿ ಮಲದಲ್ಲಿ ನೀರಿನ ಅಂಶಕಡಿಮೆಯಾಗಿ ಮಲವು ಗಟ್ಟಿಯಾಗಿ ಮಲಬದ್ದತೆ ಉಂಟಾಗುತ್ತದೆ.

7. ಒತ್ತಡ – ದೈನಂದಿನ ಕೆಲಸ ಕಾರ್ಯಗಳಲ್ಲಿ ಉಂಟಾಗುವ ಒತ್ತಡದಿಂದ ಸಣ್ಣಕರುಳಿನಲ್ಲಿ ಚಲನೆಯು(ಪೆರಿಸ್ಟಾಲಿಟಿಕ್ ಚಲನೆ) ಕಡಿಮೆಯಾಗುತ್ತದೆ. ಇದರಿಂದಲೂ ಮಲಬದ್ಧತೆ ಉಂಟಾಗುವ ಸಂಭವವಿರುತ್ತದೆ.

 

ಲೇಖಕರು
ಡಾ|| ಸಿಂಧು ಪ್ರಶಾಂತ್
ಬಿ.ಎ.ಎಮ್.ಎಸ್, ಎಮ್.ಡಿ(ಆಲ್ಟರ್ ನೇಟಿವ್ ಮೆಡಿಸನ್), ಎಮ್.ಎಸ್ಸಿ(ಯೋಗ)
ದೂರವಾಣಿ- 9743857575

ಡಾ|| ಸಿಂಧು ಅವರು ಗರ್ಭಿಣಿಯರೆಗೆ ಯೋಗದ ಮಹತ್ವ ಹಾಗು ಹೇಗೆ ಯೋಗವನ್ನು ಮಾಡಬೇಕೆಂದು ತರಬೇತಿಯನ್ನು ಸ್ಕೈಪ್ ಮುಕಾ0ತರ ಹಲವಾರು ಸ್ತ್ರೀಯರಿಗೆ ಹೇಳಿಕೂಡುತ್ತಿದ್ದಾರೆ. ಅತಿ ಶೀಘ್ರದಲ್ಲಿ ಗರ್ಭಿಣಿಯರಿಗಾಗಿ ಯೋಗ ಹಾಗು ಪ್ರಾಣಾಯಾಮವನ್ನು ಕುರಿತು ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಡಾ|| ಸಿಂಧು ಪ್ರಶಾಂತ್ ರವರು ಬಹುಮುಖ ಪ್ರತಿಭಾವಂತರು.”ನೃತ್ಯ ಪ್ರಾರ್ಥನ ” ಎಂಬ ಸಂಸ್ಥೆಯ ಸ್ಥಾಪಕಿ ಹಾಗು ಶಕ್ಷಕಿಯಾಗಿ ಹಲವಾರು ಶಿಶ್ಯವೃಂದವನ್ನು ತಯಾರಿಸುತಿರುವ ಹೇಗಳಿಕೇ ಇವರದು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ