ಭಾರತೀಯ ಮೂಲದ ವ್ಯಕ್ತಿ ಅಪಹರಿಸಿದ್ದ ಮೂವರು ಪಾಕ್ ಪ್ರಜೆಗಳ ಬಂಧನ

ನವದೆಹಲಿ:ಜು-೩೦: ಮಲೇಷಿಯಾದಲ್ಲಿ ಅಪಹರಣಕ್ಕೊಳಗಾಗಿದ್ದ ಮಧ್ಯಪ್ರದೇಶ ಮೂಲದ ವ್ಯಕ್ತಿಯನ್ನು ರಕ್ಷಿಸಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪಾಕಿಸ್ತಾನಿ ಪ್ರಜೆಗಳನ್ನು ಬಂಧನವಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಅಪಹರಣಕ್ಕೊಳಗಾಗಿದ್ದ ಸಂಜೀವ್ ಎನ್ನುವವರನ್ನು ಮಲೇಷಿಯಾ ರಾಯಲ್ ಪೋಲೀಸರು ರಕ್ಷಿಸಿದ್ದಾರೆ. ಇದೇ ವೇಳೆ ರಾಯಲ್ ಮಲೇಷಿಯಾದ ಪೊಲೀಸರು ಮೂರು ಪಾಕಿಸ್ತಾನಿ ಅಪಹರಣಕಾರರನ್ನು ಬಂಧಿಸಿದ್ದಾರೆ.

ಮಲೇಷಿಯಾ ಪೋಲೀಸರ ಈ ಯಶಸ್ವಿ ಕಾರ್ಯಾಚರಣೆಗಾಗಿ ಮಲೇಷಿಯಾದಲ್ಲಿರುವ ಭಾರತಿಯ ರಾಯಭಾರಿ ಮೃದುಲ್ ಕುಮಾರ್ ಮತ್ತವರ ತಂಡ ಪ್ರಶಂಸೆಗೆ ಅರ್ಹವಾಗಿದೆ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ಈ ನಡುವೆ ಮಲೇಷಿಯಾ ಪೋಲೀಸರ ಕಾರ್ಯಾಚರಣೆಯಲ್ಲಿ ತಮ್ಮ ರಾಜ್ಯದ ವ್ಯಕ್ತಿ ಸುರಕ್ಷಿತವಾಗಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಸುಷ್ಮಾ ಸ್ವರಾಜ್ ರವರು ಹೊರಗಿರುವ ಭಾರತೀಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್ ಹೇಳಿದ್ದಾರೆ.

Indian abducted in Malaysia rescued, 3 Pakistanis held: Sushma Swaraj

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ