ಷೇರು ಮಾರುಕಟ್ಟೆಯಲ್ಲಿ ಮತ್ತೆ ಗೂಳಿ ಆರ್ಭಟ; ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ ಅಂಕಗಳ ಆರಂಭ 37,491 ಅಂಕಗಳಿಂದ ವಹಿವಾಟು ಆರಂಭಿಸಿದ ಸೆನ್ಸೆಕ್ಸ್, 11,300ರ ಗಡಿ ದಾಟಿದ ನಿಫ್ಟಿ

ಮುಂಬೈ: ಕಳೆದ ವಾರ ದಾಖಲೆ ಅಂಕಗಳ ಏರಿಕೆಯೊಂದಿಹೆ ಸಾರ್ವಕಾಲಿಕ ದಾಖಲೆ ಬರೆದಿದ್ದ ಭಾರತೀಯ ಷೇರುಮಾರುಕಟ್ಟೆ ಇದೀಗ ಮತ್ತೊಂದು ದಾಖಲೆ ನಿರ್ಮಾಣ ಮಾಡಿದೆ.
ಷೇರುಮಾರುಕಟ್ಟೆಯಲ್ಲಿ ಗೂಳಿ ಆರ್ಭಟ ಮುಂದುವರೆದಿದ್ದು, ಸೆನ್ಸೆಕ್ಸ್ ದಾಖಲೆಯ 37,491 ಅಂಕಗಳೊಂದಿಗೆ ವಹಿವಾಟು ಆರಂಭಿಸಿದೆ. ಭಾರತೀಯ ಷೇರುಮಾರುಕಟ್ಟೆ ಇತಿಹಾಸದಲ್ಲೇ ಇದು ಸಾರ್ವಕಾಲಿಕ ಗರಿಷ್ಠ ಅಂಕಗಳ ವಹಿವಾಟು ಆರಂವಾಗಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ಅಂತೆಯೇ ನಿಫ್ಟಿ ಕೂಡ 11, 300 ಅಂಕಗಳ ಗಡಿ ದಾಟಿದ್ದು, ಇಂದು 24 ಅಂಕಗಳ ಏರಿಕೆಯೊಂದಿಗೆ ನಿಫ್ಟಿ 11, 300 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.
ಇನ್ನು ಶುಕ್ರವಾರ ವಾರದ ವಹಿವಾಟು ಅಂತ್ಯಗೊಳಿಸುವ ವೇಳೆ ಭಾರತೀಯ ಷೇರುಮಾರುಕಟ್ಟೆ ದಾಖಲೆಯ ಅಂಕಗಳ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದು. ಸೆನ್ಸೆಕ್ಸ್ 37,336.85 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದರೆ, ನಿಫ್ಟಿ 11,278.35 ಅಂಕಗಳೊಂದಿಗೆ ತನ್ನ ವಾರದ ವಹಿವಾಟು ಅಂತ್ಯಗೊಳಿಸಿತ್ತು.
ಇದೀಗ ಅದೇ ಟ್ರೆಂಡ್ ಮುಂದುವರೆದಿದ್ದು, ವಾರದ ವಹಿವಾಟು ಆರಂಭದಲ್ಲೇ ಭಾರತೀಯ ಷೇರುಮಾರುಕಟ್ಟೆ ತನ್ನ ಅಂಕಗಳನ್ನು ಏರಿಕೆ ಮಾಡಿಕೊಂಡಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ