ಖತರ್ನಾಕ್ ಕಾರುಕಳ್ಳರ ಬಂಧನ

ಗದಗ:ಜು-೨೭; ಗದಗ ಜಿಲ್ಲಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಾರುಗಳ್ಳರನ್ನು ಬಂಧಿಸಿ 10 ಕಾರುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಪ್ಪಳ ಮೂಲದ ಭೀಮಪ್ಪ ಶೆಟ್ಟಿಬಲೀಜಗ, ಬಾಬಾ ಫಕ್ರುದ್ದೀನ ಪಿಂಜಾರ್ ಹಾಗೂ ಹುಬ್ಬಳ್ಳಿ ಮೂಲದ ಶಿವಕುಮಾರ ಪೂಜಾರ ಬಂಧಿತ ಆರೋಪಿಗಳು. ಬಂಟವಾಳ ಮೂಲದ ಮೊಹಮ್ಮದ್‌ ಹನೀಫ್ ಮತ್ತು ಉಡುಪಿ ಮೂಲದ ಇಕಾಸ್ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಎಸ್‌ಪಿ ಸಂತೋಷ್‌ ಬಾಬು ತಿಳಿಸಿದ್ದಾರೆ.

ಪರಾರಿಯಾದ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿದ್ದು, ಬಂಧಿತರಿಂದ 5 ಸ್ವಿಫ್ಟ್ ಕಾರು, 2 ಹುಂಡೈ ಕಾರು, 1 ರೆನಾಲ್ಟ್ ಕಾರು, 1 ಹೋಂಡಾ ಕಾರು, 1 ಚಾವರಲೆಟ್ ಸೇರಿ ಒಟ್ಟು 66 ಲಕ್ಷ ಮೌಲ್ಯದ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಮುಖ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

Gadag,Car Theft,Arrest

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ