ಹಾವೇರಿ, ಜು.26- ಉತ್ತರ ಪ್ರತ್ಯೇಕ ರಾಜ್ಯದ ಕೂಗು ಅಸಂಬದ್ಧ. ಈ ಸಂಬಂಧ ಆ ಭಾಗದ ಶಾಸಕರು, ಸಚಿವರ ಜತೆ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಈ ಸಮಸ್ಯೆ ಕುರಿತಂತೆ ಸಭೆ ನಡೆಸುತ್ತೇನೆ. ಈಗ ಉದ್ಭವಿಸಿರುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಎಲ್ಲರಿಂದಲೂ ಸಾಧ್ಯ. ಇದಕ್ಕೆ ಪ್ರತ್ಯೇಕ ರಾಜ್ಯ ಬೇಕಾಗಿಲ್ಲ ಎಂದು ಹೇಳಿದರು. ವಿಧಾನಸಭೆಯಿಂದ ಪೀಠೋಪಕರಣ ಮನೆಗೆ ಕೊಂಡೊಯ್ದಿದ್ದು ತಪ್ಪು. ಆದರೆ ನಿಗದಿಪಡಿಸಿದ ಹಣ ಪಾವತಿಸಿ ಕೊಂಡೊಯ್ದರೆ ತಪ್ಪಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗೃಹೋಪಯೋಗಿ ವಸ್ತುಗಳನ್ನು ಸರ್ಕಾರ ಕೊಡುತ್ತದೆ. ಆದರೆ ಕೋಳಿವಾಡ ಅವರು ಪೀಠೋಪಕರಣವನ್ನು ಮನೆಗೆ ತೆಗೆದುಕೊಂಡು ಹೋಗಿರುವುದು ತಪ್ಪು ಎಂದರು.