ಗ್ರಹಣದ ಹಿನ್ನೆಲೆ: ನಾಳೆ ಚಾಮುಂಡಿ ಬೆಟ್ಟದಲ್ಲಿ 9 ಗಂಟೆವರೆಗೂ ಮಾತ್ರ ದರ್ಶನ

ಮೈಸೂರು, ಜು.26- ನಾಳೆ ಗ್ರಹಣದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ದೇವಿಯ ದರ್ಶನ ರಾತ್ರಿ 9 ಗಂಟೆವರೆಗೂ ಮಾತ್ರ ಇರಲಿದೆ. 2ನೆ ಆಷಾಢ ಶುಕ್ರವಾರವಾದ ನಾಳೆ ಎಂದಿನಂತೆ ದೇವಿಗೆ ಪೂಜೆ ಸಲ್ಲಿಸಿ ಭಕ್ತರಿಗೆ ದರ್ಶನ ವ್ಯವಸ್ಥೆ ಇದ್ದರೂ ರಾತ್ರಿ 10ರವರೆಗೆ ದೇವಾಲಯ ತೆರೆದಿರುವುದಿಲ್ಲ. ಬದಲಿಗೆ ಕೇವಲ 9 ಗಂಟೆವರೆಗೂ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಪ್ರತಿ ಆಷಾಢ ಶುಕ್ರವಾರದಂದು ಬೆಟ್ಟಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಆದರೆ ನಾಳೆ ಚಂದ್ರಗ್ರಹಣದ ಹಿನ್ನೆಲೆಯಲ್ಲಿ 9 ಗಂಟೆಗೆ ದೇವಾಲಯದ ಬಾಗಿಲು ಹಾಕಿ ನಂತರ ಮಧ್ಯ ರಾತ್ರಿ ದೇವಿಗೆ ವಿಶೇಷ ಪೂಜೆ ನಡೆಸಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ