ಲಕ್ಷ್ಮೀವರ ತೀರ್ಥರ ಸಾವು: ದಿನಕ್ಕೊಂದು ಕುತೂಹಲ

ಉಡುಪಿ, ಜು.26- ಶೀರೂರು ಶ್ರೀ ಲಕ್ಷ್ಮೀವರ ತೀರ್ಥರ ಅಸಹಜ ಸಾವು ಪ್ರಕರಣ ದಿನದಿಂದ ದಿನಕ್ಕೆ ಕುತೂಹಲ ಪಡೆಯುತ್ತಿದ್ದು, ಮಠದಲ್ಲಿ ಕಳವಾಗಿದ್ದ 3ಕೆಜಿ ಚಿನ್ನಾಭರಣದ ಬಗ್ಗೆ ಪೆÇಲೀಸರು ಬುಲೆಟ್ ಗಣೇಶ್ ಎಂಬುವವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸ್ವಾಮೀಜಿಯವರಿಗೆ ದುಬಾರಿ ಕಾರು ತೆಗೆಸಿಕೊಟ್ಟಿದ್ದ ಹಿನ್ನೆಲೆಯಲ್ಲಿ ಪೆÇಲೀಸರು ಗಣೇಶ್‍ನಿಂದ ಮಹತ್ವದ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ. ಮಲ್ಪೆ ನಿವಾಸಿಯಾಗಿರುವ ಬುಲೆಟ್ ಗಣೇಶ ಮುಖ್ಯಪ್ರಾಣ ದೇವರ ಭಕ್ತನಾಗಿದ್ದ. ಈತ ಪ್ರತಿ ವಾರ ಶೀರೂರು ಮೂಲಮಠಕ್ಕೆ ಬಂದು ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಇಂದು ಮಠಕ್ಕೆ ಭೇಟಿ ನೀಡಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಶ್ರೀಗಳ ಮರಣೋತ್ತರ ಪರೀಕ್ಷೆಯ ವರದಿ ನಾಳೆ ಅಥವಾ ನಾಡಿದ್ದು, ತನಿಖಾಧಿಕಾರಿಗಳಿಗೆ ತಲುಪುವ ನಿರೀಕ್ಷೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ