ಅಸಂಘಟಿತ ಕಾರ್ಮಿಕರಿಗಾಗಿ ಕಾನೂನು ಅರಿವು ಹಾಗೂ ಸೇವಾ ಸೌಲಭ್ಯ ಶಿಬಿರ

Varta Mitra News

ಕೋಲಾರ, ಜು.26- ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಮೇರೆಗೆ ಅಸಂಘಟಿತ ಕಾರ್ಮಿಕರಿಗಾಗಿ ಕಾನೂನು ಅರಿವು ಹಾಗೂ ಸೇವಾ ಸೌಲಭ್ಯ ಶಿಬಿರವನ್ನು ಜು.28ರಂದು ಡಾ.ಅಂಬೇಡ್ಕರ್ ಭವನದಲ್ಲಿ ನಡೆಸಲಾಗುವುದು ಎಂದು ಪ್ರಭಾರ ಜಿಲ್ಲಾ ಸತ್ರ ನ್ಯಾಯಾಧೀಶರಾದ ನಬಿರ ಸೂಲಾ ಮಮದಾಪುರ ಹೇಳಿದರು. ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಅವರ ಅರಿವಿಗೆ ಬಾರದೇ ಮಾಯವಾಗುತ್ತಿದೆ. ಆದ್ದರಿಂದ ಇಂತಹ ಅಸಂಘಟಿತರಿಗೆ ಶಿಬಿರಗಳನ್ನು ಏರ್ಪಡಿಸಿ ಅತಿ ಪ್ರಮುಖ 10 ಇಲಾಖೆಗಳ ಅಧಿಕಾರಿಗಳು ಒಂದೇ ಸೂರಿನಡಿ ಇದ್ದು ಆ ವ್ಯಕ್ತಿಗೆ ಸಿಗಬೇಕಾದ ಯೋಜನಾ ಫಲಗಳನ್ನು ಅವರುಗಳಿಗೆ ಸಲ್ಲಿಸುವುದೇ ಶಿಬಿರದ ಉದ್ದೇಶ ಎಂದು ಹೇಳಿದರು. ಶಿಬಿರದಲ್ಲಿ ಯಾವ ಮಧ್ಯವರ್ತಿಗಳಿಗೂ ಅವಕಾಶ ಇರುವುದಿಲ್ಲ. ಶಿಬಿರದಲ್ಲಿ ಇಲಾಖೆಯ ಮುಖ್ಯಸ್ಥರು ಒಳಗೊಂಡಂತೆ ಇಲಾಖೆಯ ಯೋಜನೆಗಳನ್ನೊಳಗೊಂಡ ಭಿತ್ತಿಪತ್ರಗಳನ್ನೊಳಗೊಂಡಂತೆ ಸ್ಟಾಲ್‍ಗಳನ್ನು ನಿರ್ಮಿಸಲಾಗಿರುತ್ತದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಸದಸ್ಯ ಕಾರ್ಯದರ್ಶಿಗಳಾದ ಗುರುರಾಜ.ಜಿ.ಶಿರೋಳ ಅವರು ಮಾತನಾಡಿ, ಜಿಲ್ಲೆಯಲ್ಲಿ ಇಂತಹ ಬೃಹತ್ ಶಿಬಿರಗಳು ಎರಡನೆ ಭಾರಿ ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ 4ನೆ ಶಿಬಿರ ನಡೆಯುತ್ತಿದ್ದು , ಶಿಬಿರಕ್ಕೆ ಬರುವ ಅಸಂಘಟಿತ ಕಾರ್ಮಿಕರು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ 6 ಪಾಸ್‍ಪೆÇೀರ್ಟ್ ಫೆÇೀಟೋಗಳನ್ನು ಅಗತ್ಯವಾದ ದಾಖಲೆಗಳನ್ನು ತರಬೇಕು ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ