ಹುಬ್ಬಳ್ಳಿ ಜು, ೨೬- ಉತ್ತರ ಕರ್ನಾಟಕವನ್ನು ಪ್ರತಿಯೊಂದು ಕ್ಷೇತ್ರದಲ್ಲಿ ಕಡೆಗಣಿಸಲಾಗುತ್ತದೆ. ಈ ಅನ್ಯಾಯದ ವಿರುದ್ಧ ದಿನದಿಂದ ದಿನಕ್ಕೆ ಹೋರಾಟ ಬಲಗೊಳ್ಳುತಿದ್ದು ಈಗ ಮತ್ತೆ ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಆಗ್ರಹಿಸಿ ಮಲ್ಲಪ್ರಭಾ ಅಚ್ಚು ಕಟ್ಟು ಪ್ರದೇಶದ ರೈತರ ಕೂಗು ಕೇಳಿ ಬಂದಿದೆ.
ಕರ್ನಾಟಕ ಏಕೀಕರಣಕ್ಕೆ ದೊಡ್ಡದಾದ ಬಲ ತಂದು ಕೊಟ್ಟ ನಾಡಿನಿಂದಲೇ ಈ ಕೂಗು ಕೇಳಿ ಬಂದಿದ್ದು ಆಗಷ್ಟ್ ೨ ರಂದು ಉಕ ಬಂದ್ ನೀಡಲಾಗಿದೆ.
ಅಧಿಕಾರದ ವಿಕೇಂದ್ರೀಕರಣ ಉದ್ದೇಶ ಈಡೇರಿಲ್ಲ. ಡಾ.ಡಿ.ಎಂ.ನಂಜುಂಡಪ್ಪ ವರದಿ ಸಮರ್ಪಕವಾಗಿ ಜಾರಿಗೊಂಡಿಲ್ಲ.ಕಳಸಾ ಬಂಡೂರಿ ಯೋಜನೆ ದಶಕಗಳ ಹೋರಾಟ ಮಾಡಿದರು ಕವಡೆ ಕಾಸಿನ ಕಿಮ್ಮತಿಲ್ಲ. ಹಾಗಾದಾರೆ ನಮಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ನೀಡಿ ಎಂದು ಆಗಷ್ಟ ೨ ರಂದು ಉತ್ತರ ಕರ್ನಾಟಕ ಭಾಗದ ೧೩ ಜಿಲ್ಲೆಯ ರೈತರು ಬೀದಿಗಿಳಿಯಲ್ಲಿದ್ದಾರೆ.
ಉತ್ತರಕರ್ನಾಟಕ ಜನ ಕಷ್ಟಸಹಿಷ್ಣುಗಳು ನಿಜ. ಹಲವು ದಕಶಗಳವರೆಗೂ ಈ ಭಾಗಕ್ಕೆ ಆಗ್ತಿರೋ ಅನ್ಯಾವನ್ನ ನುಂಗಿಕೊಂಡೇ ಅಖಂಡ ಕರ್ನಾಟಕದ ಅಸ್ತಿತ್ವ ಕಾಪಾಡಿಕೊಳ್ಳೋಕೆ ಇಲ್ಲಿನ ಜನ ತ್ಯಾಗ ಗುಣವೇ ಕಾರಣ. ಆದ್ರೇ, ಇದೇ ಜನರೀಗ ಸಿಡಿದೇಳ್ತಿದ್ದಾರೆ. ಪ್ರತ್ಯೇಕ ರಾಜ್ಯ ಬೇಕು ಅಂತ ಕೂಗೆಬ್ಬಿಸಿದ್ದಾರೆ. ಕುಡಿಯುವ ನೀರಿನ ಮಹದಾಯಿ ಯೋಜನೆ, ಕೈಗಾರಿಕೆ, ಸಂಪುಟದಲ್ಲಿ ಸಿಗದ ಪ್ರಾತಿನಿಧ್ಯ, ಸಾಲ ಮನ್ನಾದಲ್ಲೂ ಅನ್ಯಾಯವಾಗಿದೆ. ಅದರಲ್ಲೂ ಈ ಭಾಗದ ರಾಜಕಾರಣಿಗಳ ಅಸಮರ್ಥತೆ ಕೂಡ ಹಿನ್ನಡೆ ತಂದೊಡ್ಡಿದೆ. ಬಜೆಟ್ ನಲ್ಲೂ ಶೇ. 82ರಷ್ಟು ದಕ್ಷಿಣ ಕರ್ನಾಟಕಕ್ಕೆ ಮೀಸಲು. ಇದರ ವಿರುದ್ಧವೇ ಈ ಭಾಗದ ಜನ ದನಿ ಎತ್ತುತ್ತಿದಾರೆ. ರೈತರ ಸಂಪೂರ್ಣ ಸಾಲ ಮನ್ನಾ, ಮಹದಾಯಿ ವಿವಾದ ಇತ್ಯರ್ಥ ಸೇರಿದಂತೆ ಆಗಿರೋ ಅನ್ಯಾಯ ಸರಪಡಿಸಲು ಆಗ್ರಹಿಸಿ ಹೋರಾಟ ನಡೀತಿದೆ. ಆಗಸ್ಟ್ 2ರಂದು 13 ಜಿಲ್ಲೆಗಳ ಸಂಪೂರ್ಣ ಉತ್ತರಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎನ್ನುತ್ತಾರೆ ರೈತ ಪ್ರಮುಖರು.
2002 ರಲ್ಲಿ ಪ್ರತ್ಯೇಕ ರಾಜ್ಯದ ಕೂಗಿಗೆ ಬಲ ಬಂತು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರೇ ಉತ್ತರಕರ್ನಾಟಕ ಸ್ವಾಭಿಮಾನ ಸ್ತೂಪ ಕೂಡ ಅನಾವರಣ ಮಾಡಲಾಗಿತ್ತು. ಜತೆಗೆ ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವಜ ಆರೋಹಣ ಮಾಡಲಾಗಿತ್ತು. ಇದಕ್ಕಾಗಿ 74 ಮಂದಿ ಮೇಲೆ ಕ್ರಿಮಿನಲ್ ಕೇಸ್ ಹಾಕಲಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಡಾ. ನಂಜುಂಡಪ್ಪ ವರದಿ ಹಾಗೂ ಡಾ. ಸ್ವಾಮಿನಾಥನ್ ಆಯೋಗಗಳು ವರದಿ ನೀಡಿವೆ. 124 ಹಿಂದುಳಿದ, 25-30 ತಾಲೂಕು ಅತ್ಯಂತ ಹಿಂದುಳಿದಿವೆ ಅಂತ ವರದಿಯಲ್ಲಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಿಸೋದಕ್ಕಾಗಿ ಕೆಲ ಶಿಫಾರಸು ಮಾಡಾಲಾಗಿತ್ತು. ನೀರಾವರಿ, ಕೈಗಾರಿಕೆ, ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳಿಗೂ ಈ ಭಾಗಕ್ಕೆ ಅನ್ಯಾಯ ಮುಂದುವರೆದೇ ಇದೆ.ಇತ್ತೀಚೆಗೆ ಮಂಡಿಸಿದ ಬಜೆಟ್ ಇದಕ್ಕೆ ತಾಜಾ ಉದಾಹರಣೆ. ಇನ್ನು ಬೆಳಗಾವಿಯಲ್ಲಿ ಸುವರ್ಣಸೌಧವಿದೆ. ಧಾರವಾಡ, ಕಲಬುರ್ಗಿಯಲ್ಲಿ ಹೈಕೋರ್ಟ್ ಗಳಿವೆ. ತಾಲೂಕು, ಜಿಲ್ಲೆಗಳ ರಚನೆಯಾಗಿವೆ. ಆಡಳಿತಾತ್ಮಕವಾಗಿ ಹೊಸ ರಾಜ್ಯ ರಚನೆಯಾದ್ರೇ ತಪ್ಪೇನಿಲ್ಲ. ಸಿಎಂ ಹೆಚ್ ಡಿಕೆ ಒಂದ್ ಸಮಿತಿ ರಚಿಸಿ ಉತ್ತರಕರ್ನಾಟಕ ರಾಜ್ಯದ ಗಡಿ ಗುರುತಿಸುವಂತಾಗ್ಬೇಕು. ಆದ್ದರಿಂದ ಬೆಳಗಾವಿಗೆ ಉತ್ತರ ಕರ್ನಾಟಕ ಭಾಗದ ತರಕಾರಿ ಸರಬರಾಜು ಸಹ ನಿಲ್ಲಿಸಿ ಪ್ರತ್ಯೇಕ ರಾಜ್ಯಕ್ಕಾಗಿ ನಮ್ಮ ಹೋರಾಟ ಎನ್ನುತ್ತಾರೆ ಹೋರಾಟಗಾರರು.
ಮೂರು ವರ್ಷ ಕಳೆದರೂ ಈ ಭಾಗಕ್ಕೆ ಕುಡಿಯಲು ನೀರು ಸಿಕ್ಕಿಲ್ಲ. ಆದ್ದರಿಂದ ಈಗ ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಕೇಳಿ ಬಂದಿದೆ. ತೆಲಂಗಾಣ ಮಾದರಿ ಉತ್ತರಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಕೊಟ್ರೇ ತಪ್ಪೇನಿಲ್ಲ. ಪ್ರತ್ಯೇಕ ರಾಜ್ಯ ಬೇಕೇಬೇಕು ಈ ಹೋರಾಟಕ್ಕೆ ಚಲನಚಿತ್ರ ಚಿತ್ರ ವಾಣಿಜ್ಯ ಮಂಡಳಿ, ವಾಣಿಜ್ಯ ಮಂಡಳಿ, ವಿದ್ಯಾರ್ಥಿ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಬೆಂಬಲ ನೀಡಿದ್ದು. ಈ ಹೋರಾಟ ತಾರ್ಕಿಕ ಅಂತ್ಯ ಕಾಣತ್ತಾ ಕಾಲವೇ ಉತ್ತರ ನೀಡಬೇಕು.
North Karnataka to observe bandh, on August 2, for separate statehood