ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಸ್ಥಿತಿ ಗಂಭೀರ!

ಚೆನ್ನೈ: ಡಿಎಂಕೆ ಮುಖಸ್ಥ ಎಂ ಕರುಣಾನಿಧಿ ಆರೋಗ್ಯ ಬಿಗಡಾಯಿಸಿದ್ದು, ಚೆನ್ನೈನ ಅವರ ಮನೆಯನ್ನೇ ಆಸ್ಪತ್ರೆ ಮಾಡಿಕೊಂಡು ಕಾವೇರಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡ್ತಿದ್ದಾರೆ.

94 ವರ್ಷದ ವಯೋವೃದ್ಧ ರಾಜಕಾರಣಿ ಕರುಣಾನಿಧಿ ಅವರಿಗೆ ವಯೋಸಹಜ ಕಾರಣಗಳಿಂದಾಗಿ ಆರೋಗ್ಯ ಕ್ಷೀಣಿಸಿದ್ದು, ಮೂತ್ರನಾಳ ಸೋಂಕಿನ ಕಾರಣ ಜ್ವರ ಬಂದಿದೆ. ಅವರಿಗೆ ಅಗತ್ಯವಿರುವ ಚಿಕಿತ್ಸೆಯನ್ನು ತಜ್ಞ ವೈದ್ಯರು ನೀಡ್ತಿದ್ದಾರೆ.

ವಿಷಯ ತಿಳಿದ ಡಿಎಂಕೆ ಕಾರ್ಯಕರ್ತರು, ನಾಯಕರು ಭಾರೀ ಸಂಖ್ಯೆಯಲ್ಲಿ ಗೋಪಾಲಪುರದಲ್ಲಿರುವ ಕರುಣಾನಿಧಿ ನಿವಾಸದ ಮುಂದೆ ಸೇರಿದ್ದಾರೆ. ಕಮಲ್‍ಹಸನ್, ಎಐಎಡಿಎಂಕೆ ನಾಯಕರು ಎಂಕೆ ಸ್ಟಾಲಿನ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದ್ರೆ ಕರುಣಾನಿಧಿ ಭೇಟಿಗೆ ಯಾರಿಗೂ ಅವಕಾಶ ನೀಡಿಲ್ಲ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ