
ಮೈಸೂರು, ಜು.24-ಕುಡಿದ ಮತ್ತಿನಲ್ಲಿ ದಾಂಧಲೆ ನಡೆಸಿದ ಕಿಡಿಗೇಡಿಗಳು ಪಟ್ಟಣ ತಾಲೂಕು ಕಿತ್ತೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಬೆಳಿಗ್ಗೆ ಕಾಲೇಜಿನಲ್ಲಿ ಬೆಂಕಿ ಉರಿಯುತ್ತಿದ್ದುದನ್ನು ಕಂಡು ಧಾವಿಸಿದ ಗ್ರಾಮಸ್ಥರು, ನೀರು, ಮರಳು ಹಾಕಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಕೆಲವು ಕಿಡಿಗೇಡಿಗಳು ಈ ಪದವಿಪೂರ್ವ ಕಾಲೇಜನ್ನು ಸಂಜೆ ವೇಳೆ ಅನೈತಿಕ ತಾಣವಾಗಿ ಮಾಡಿಕೊಂಡಿದ್ದು, ಇಂದು ಬೆಳಗ್ಗೆ ಶಿಕ್ಷಕರ ಕೊಠಡಿಗೆ ಬೆಂಕಿ ಇಟ್ಟಿದ್ದಾರೆ.
ಈ ಬಗ್ಗೆ ಹಲವು ಬಾರಿ ಪೆÇಲೀಸರ ಗಮನಕ್ಕೆ ತಂದಿದ್ದರೂ ಕ್ರಮಕೈಗೊಂಡಿಲ್ಲ. ಇಂದು ಬೆಂಕಿ ಇಟ್ಟಿದ್ದಾರೆ, ಮುಂದೆ ಇನ್ನೇನು ಮಾಡುತ್ತಾರೋ? ಈ ಕಿಡಿಗೇಡಿಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಟ್ಟದಪುರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ.