ಶಾಲಾ ಆವರಣದಲ್ಲಿ ಅಪರೂಪದ ಊಸರವಳ್ಳಿ

ತುಮಕೂರು, ಜು.24- ಶಾಲಾ ಆವರಣದಲ್ಲಿ ಅಪರೂಪದ ಊಸರವಳ್ಳಿ ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಕ್ಷಣಕಾಲ ಆತಂಕಕ್ಕೀಡಾದ ಚಿಕ್ಕನಾಯಕನಹಳ್ಳಿ ತಾಲೂಕಿನ ಮತಿಘಟ್ಟ ಪ್ರೌಢಶಾಲೆಯಲ್ಲಿ ನಡೆದಿದೆ.
ಶಾಲಾ ಕೊಠಡಿಯ ಕಬ್ಬಿಣದ ಸರಳಿನ ಮೇಲೆ ಊಸರವಳ್ಳಿ ಓಡಾಡುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿಗಳು ಕೂಡಲೇ ಶಾಲೆಯಿಂದ ಹೊರಬಂದು ಶಿಕ್ಷಕರಿಗೆ ತೋರಿಸಿದ್ದಾರೆ.
ಶಿಕ್ಷಕರೊಬ್ಬರು ಊಸರವಳ್ಳಿಯನ್ನು ಹಿಡಿದು ಸ್ವಭಾವ ಮತ್ತು ಅದರಿಂದಾಗುವ ಅನಾಹುತಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ