ತೃತೀಯರಂಗ ಒಂದಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಹತಾಶರಾಗಿದ್ದಾರೆ – ಕೃಷ್ಣಬೈರೇಗೌಡ

ಹುಬ್ಬಳ್ಳಿ 24 – ತೃತೀಯರಂಗ ಒಂದಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಹತಾಶರಾಗಿದ್ದಾರೆ ಎಂದು ಸಚಿವ ಕೃಷ್ಣಬೈರೇಗೌಡ ಬಿಜಿಪಿ ವಿರುದ್ಧ ಕುಟುಕಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಮಿತ್ರಪಕ್ಷಗಳಿಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಹೀಗಾಗಿ ಶಿವಸೇನೆ, ಪಿಡಿಪಿ,ಟಿಡಿಪಿ ಸೇರಿದಂತೆ ಇನ್ನಿತರೆ ಮಿತ್ರಪಕ್ಷಗಳು ಬಿಜೆಪಿಯಿಂದ ದೂರವಾಗುತ್ತಿವೆ. ಇದೀಗ ವಿಪಕ್ಷಗಳು ಒಂದಾಗಿರುವುದರಿಂದ ಬಿಜೆಪಿಗೆ ನಡುಕ ಹುಟ್ಟಿದೆ. ಹೀಗಾಗಿ ರಾಹುಲ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ತೃತೀಯರಂಗ ಒಗ್ಗೂಡಿ ಚುನಾವಣೆ ಎದುರಿಸಲಿದೆ. ಪ್ರಧಾನಿ ಆಯ್ಕೆ ಮುಂದಿನ ವಿಚಾರ ಎಂದರು. ಇನ್ನೂ ಅವಿನಾಶ ಅಮರಲಾಲ್ ಲಾಕರ್ ಪ್ರಕರಣ ಹಿನ್ನೆಲೆ, ಅವರೊಂದಿಗೆ ರಾಜಕೀಯ ಪಕ್ಷಗಳ ನಾಯಕರ ಮಕ್ಕಳು ಶಾಮೀಲಾಗಿದ್ದಾರೆಂದು ಮುಂಚಿತವಾಗಿ ತನಿಖೆಗು ಮೊದಲೇ ಆರೋಪ ಮಾಡುವುದು ಸರಿಯಲ್ಲ. ಈ ಕುರಿತು ಸಮಗ್ರ ತನಿಖೆ ನಡೆಯಲಿ ಎಂದರು. ರಾಹುಲ್ ವಿರುದ್ಧ ಪ್ರಹ್ಲಾದ್ ಜೋಶಿ ಹಕ್ಕು ಚ್ಯುತಿ ಮಂಡಿಸಲಿ. ಆ ಕುರಿತು ಸದನದಲ್ಲಿ ಚರ್ಚೆಯಾಗಲಿ ಎಂದು ಸಚಿವ ಕೃಷ್ಣಭೈರೆಗೌಡ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ