
ತುಮಕೂರು, ಜು.21- ಗೃಹಿಣಿಯೊಬ್ಬರು ಮನೆಯಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಉಪ್ಪಾರಳ್ಳಿಯಲ್ಲಿ ನಡೆದಿದೆ. ಶೋಭಾ (22) ಸಾವನ್ನಪ್ಪಿರುವ ಮಹಿಳೆ. ಕೋರಾ ಮೂಲದ ಶೋಭಾ ಅವರು ಕಳೆದ ಒಂದು ವರ್ಷದ ಹಿಂದೆ ದೇವರಾಜ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು.
ದೇವರಾಜ್ ಆಟೋ ಚಾಲಕನಾಗಿದ್ದು, ಪ್ರಾರಂಭದಲ್ಲಿ ಇವರ ಸಾಂಸಾರಿಕ ಜೀವನ ಚೆನ್ನಾಗಿಯೇ ಇತ್ತು. ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಕಳೆದ ರಾತ್ರಿಯೂ ಸಹ ಯಾವುದೋ ವಿಷಯಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಇಂದು ಬೆಳಗ್ಗೆ ಶೋಭಾ ಅನುಮಾನಸ್ಪದವಾಗಿ ಸಾವನ್ನಪ್ಪರಿವುದು ಹಲವು ಅನುಮಾಗಳಿಗೆ ಎಡೆಮಾಡಿಕೊಟ್ಟಿದೆ.
ದೇವರಾಜ್ ಕೋರಾದಿಂದ ಶೋಭಾಳ ತಂದೆಯನ್ನು ಕರೆಸಿಕೊಂಡು ಮನೆ ಬೀಗ ಕೊಟ್ಟು ಪರಾರಿಯಾಗಿದ್ದಾನೆ.
ಶವದ ಪಕ್ಕ ಹಗ್ಗ ಪತ್ತೆಯಾಗಿದ್ದು, ಕೊಲೆಯಾಗಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಎನ್ಇಪಿಎಸ್ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ದೇವರಾಜ್ ಪತ್ತೆಗೆ ಶೋಧ ಕೈಗೊಂಡಿದ್ದಾರೆ.