ಮಾರಕಾಸ್ತ್ರಗಳಿಂದ ದಾಳಿ ನೆಡೆಸಿ ಕೊಲೆ

ಮೈಸೂರು, ಜು.21-ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಣ್ಣ ಜೈಲು ಸೇರಿದ್ದರಿಂದ ನೊಂದ ತಮ್ಮ ತಡರಾತ್ರಿ ಅತ್ತಿಗೆ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ದಾಂಧಲೆ ನಡೆಸಿದ್ದರಿಂದ ಒಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಉದಯಗಿರಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಾಂತಿನಗರದ ನಿವಾಸಿ ಅಸ್ಲಾಂಪಾಷ ಕೊಲೆಯಾಗಿರುವ ದುರ್ದೈವಿ.
ಕಳೆದ ಐದು ವರ್ಷದ ಹಿಂದೆ ಸೈಯ್ಯದ್ ಸುಹೇಲ್ ಎಂಬುವರು ನಫೀಜಾಳನ್ನು ಮದುವೆಯಾಗಿದ್ದು, ಕಳೆದ ಮೂರು ವರ್ಷಗಳಿಂದ ದಂಪತಿ ನಡುವೆ ಜಗಳವಾಗಿ ಬೇರೆ ಬೇರೆಯಾಗಿದ್ದರು.
ನಫೀಜಾ ಶಾಂತಿನಗರದಲ್ಲಿರುವ ತಂದೆ ಅಸ್ಲಾಂ ಪಾಷ ತನ್ನ ತಾಯಿ ದಿಲ್‍ಶದ್ ಬಾನು ಜೊತೆ ವಾಸವಾಗಿದ್ದರು.
ಪತಿಯಿಂದ ದೂರವಾಗಿದ್ದ ನಫೀಜಾ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ಪರಿಹಾರ ನೀಡುವಂತೆ ಸೈಯ್ಯದ್ ಸುಹೇಲ್‍ಗೆ ಸೂಚಿಸಿತ್ತು.
ನ್ಯಾಯಾಲಯ ಸೂಚಿಸಿದಂತೆ ಪೂರ್ಣ ಪರಿಹಾರ ನೀಡದೆ 80 ಸಾವಿರ ಬಾಕಿ ಉಳಿಸಿಕೊಂಡಿದ್ದರಿಂದ ಮತ್ತೆ ನಫೀಜಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಸಂದರ್ಭದಲ್ಲಿ ವಾದ-ವಿವಾದ ನಡೆದು ಸುಹೇಲ್‍ನನ್ನು ಜೈಲಿಗೆ ಕಳುಹಿಸಲಾಗಿತ್ತು. ಅಣ್ಣನನ್ನು ಜೈಲಿಗೆ ಕಳುಹಿಸಿದ್ದ ಅತ್ತಿಗೆ ಮೇಲೆ ಜಿದ್ದು ಸಾಧಿಸುತ್ತಿದ್ದ ಮೈದುನ ಸೈಯ್ಯದ್ ಇರ್ಫಾನ್ ತಡರಾತ್ರಿ ಅತ್ತಿಗೆ ಮನೆಗೆ ನುಗ್ಗಿ ಕುಟುಂಬದವರೊಂದಿಗೆ ಜಗಳವಾಡಿದ್ದಾನೆ.
ಈ ವೇಳೆ ತಳ್ಳಾಟ ನೂಕಾಟ ನಡೆದಾಗ ಮಧ್ಯಪ್ರವೇಶಿಸಿದ ನಫೀಜಾರ ತಂದೆ ಅಸ್ಲಾಂ ಪಾಷ ಮೇಲೆ ಮಾರಕಾಸ್ತ್ರಗಳಿಂದ ಸೈಯ್ಯದ್ ಇರ್ಫಾನ್ ಹಲ್ಲೆ ನಡೆಸಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಪಾಷರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ನಫೀಜಾ ಹಾಗೂ ಇವರ ತಾಯಿ ದಿಲ್‍ಶದ್ ಬಾನು ಸಹ ಗಂಭೀರ ಗಾಯಗೊಂಡಿದ್ದಾರೆ.
ಸುದ್ದಿ ತಿಳಿದ ಉದಯಗಿರಿ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ