ಬೈಕ್‍ಗೆ ಲಾರಿ ಡಿಕ್ಕಿ ಸವಾರನ ಸಾವು

ದಾವಣಗೆರೆ, ಜು.21- ಬೈಕ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸವಳಂಗ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನ್ಯಾಮತಿ ತಾಲ್ಲೂಕಿನ ಕೊಡತಿ ಗೊಂಡನಹಳ್ಳಿ ನಿವಾಸಿ ರಾಜಪ್ಪ (50) ಮೃತ ದುರ್ದೈವಿ. ಸವಳಂಗ ಸಮೀಪದ ಗ್ರಾಮವೊಂದರ ಹೊಲದಲ್ಲಿ ಬೋರ್ ಪಾಯಿಂಟ್ ತೋರಿಸಿ ಹಿಂದಿರುಗುವಾಗ ರಾಜ್ಯ ಹೆದ್ದಾರಿಯ ಪೆÇಲೀಸ್ ಠಾಣೆ ಎದುರೇ ಈ ದುರ್ಘಟನೆ ಸಂಭವಿಸಿದೆ. ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬೋರ್ ಪಾಯಿಂಟ್ ತೋರಿಸುತ್ತಿದ್ದ ರಾಜಪ್ಪ, ರೈತರಿಗೆ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು. ಪೆÇಲೀಸ್ ಠಾಣೆ ಮುಂಭಾಗದಲ್ಲೇ ಈ ದುರ್ಘಟನೆ ನಡೆದಿದ್ದರಿಂದ ಕೂಡಲೇ ಸ್ಥಳಕ್ಕಾಗಮಿಸಿದ ಪೆÇಲೀಸರು ಲಾರಿ ಮತ್ತು ಚಾಲಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ