ಬೆಂಗಳೂರು, ಜು.21- ನಗರದ ಬೌರಿಂಗ್ ಇನ್ಸ್ಸ್ಟಿಟ್ಯೂಟ್ನ ಮೂರು ಲಾಕರ್ಗಳಲ್ಲಿ ಕೋಟ್ಯಂತರ ರೂ.ನಗದು, ಚಿನ್ನದ ಬಿಸ್ಕತ್ಗಳು, ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಗುಜರಾತ್ ಮೂಲದ ಫೈನಾನ್ಸಿಯರ್ ಹಾಗು ಉದ್ಯಮಿ ಅವಿನಾಶ್ ಎಂಬವರು ಬಳಸುತ್ತಿದ್ದ ಈ ಲಾಕರ್ಗಳಲ್ಲಿ 3.90 ಕೋಟಿ ರೂ. ನಗದು, ಅಪಾರ ಬೆಲೆಯ ಚಿನ್ನದ ಬಿಸ್ಕಟ್ಗಳು ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ.
ಟಯರ್ ಶೋರೂಂ ಮಾಲೀಕರೂ ಆದ ಉದ್ಯಮಿ ಅವಿನಾಶ್ ಅವರು ಬೌರಿಂಗ್ ಸಂಸ್ಥೆಯ ಈ ಮೂರು ಲಾಕರ್ಗಳನ್ನು ಬಳಸುತ್ತಿದ್ದರು ಎಂದು ತಿಳಿದುಬಂದಿದೆ.
ಬೌರಿಂಗ್ ಇನ್ಸ್ಸ್ಟಿಟ್ಯೂಟ್ನಲ್ಲ್ಲಿ ಸುಮಾರು 126 ಲಾಕರ್ಗಳಿವೆ. ಇವುಗಳನ್ನು ಸರಿಯಾಗಿ ಬಳಸುತ್ತಿಲ್ಲ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಎಲ್ಲಾ ಲಾಕರ್ನ ವಾರಸುದಾರರಿಗೆ ನೋಟಿಸ್ ನೀಡಿ ಪರಿಶೀಲಿಸಲು ಸೂಚಿಸಿತ್ತು. ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಎಲ್ಲ ಲಾಕರ್ ವಾರಸುದಾರರು ಬಂದಿದ್ದರು. ಆದರೆ ಮೂರು ಲಾಕರ್ ವಾರಸುದಾರರು ಬಂದಿರಲಿಲ್ಲ. ಇದರಿಂದ ಆಡಳಿತ ಮಂಡಳಿ ಅವರಿಗೆ ನೋಟಿಸ್ ನೀಡಿ, ನಿಗದಿತ ಸಮಯದೊಳಗೆ ಬಾರದಿದ್ದರೆ ಲಾಕರ್ ಒಡೆಯುವುದಾಗಿಯೂ ತಿಳಿಸಿತ್ತು. ನಿಗದಿತ ಸಮಯಕ್ಕೆ ಅವಿನಾಶ್ ಬಾರದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯವರು ಅವಿನಾಶ್ ಅವರ ಹೆಸರಲ್ಲಿದ್ದ ಮೂರು ಲಾಕರ್ಗಳನ್ನು ಒಡೆದಾಗ ಅಪಾರ ಪ್ರಮಾಣದ ಹಣ, ಚಿನ್ನ, ಭೂ ದಾಖಲೆ ಪತ್ರಗಳು ಪತ್ತೆಯಾಗಿವೆ.
ತಕ್ಷಣ ಆಡಳಿತ ಮಂಡಳಿ ಕಬ್ಬನ್ ಪಾರ್ಕ್ ಪೆÇಲೀಸರಿಗೆ ವಿಷಯ ತಿಳಿಸಿದೆ. ಆದರೆ ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದ ಪೆÇಲೀಸರು, ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದರು. ಈ ನಡುವೆ ಆಡಳಿತ ಮಂಡಳಿಯೂ ಸಹ ಐಟಿ ಅಧಿಕಾರಿಗಳ ಗಮನಕ್ಕೆ ತಂದಿದೆ. ವಿಷಯ ತಿಳಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಗದು, ಚಿನ್ನ ಮತ್ತು ದಾಖಲೆ ಪತ್ರಗಳನ್ನು ಪರಿಶೀಲಿಸಿ ತನಿಖೆ ಆರಂಭಿಸಿದ್ದಾರೆ.
ಹಣ, ಚಿನ್ನ ಯಾರಿಗೆ ಸೇರಿದ್ದು, ಆಸ್ತಿ ದಾಖಲೆಗಳು ಯಾರ ಹೆಸರಲ್ಲಿವೆ ಮುಂತಾದ ಅಂಶಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಈ ಮೂರು ಲಾಕರ್ಗಳನ್ನು ಉದ್ಯಮಿ ಅವಿನಾಶ್ ಅವರೇ ಬಳಸುತ್ತಿದ್ದರೇ? ಅಥವಾ ಬೇರೆ ಯಾರಾದರೂ ಬಳಸುತ್ತಿದ್ದರೇ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ಸ್ಸ್ಟಿಟ್ಯೂಟ್ನ ಲಾಕರ್ಗಳಲ್ಲಿ ಕ್ರೀಡೆಗೆ ಸಂಬಂಧಿಸಿದ ಬಟ್ಟೆ, ಶೂ ಇತ್ಯಾದಿ ವಸ್ತುಗಳನ್ನು ಇಡಬಹುದು. ಆದರೆ ಹಣ, ಚಿನ್ನ, ದಾಖಲೆಗಳು ಇಟ್ಟಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
Bowring Institute,gold biscuits,millions of rupees,Investigations,Income Tax Department officials