ಮಹಿಳಾ ಸುರಕ್ಷತೆಯ ಜಾಹಿರಾತನ್ನು ಪರಿಣಾಮಕಾರಿಯಾಗಿ ಪ್ರಸಾರ ಮಾಡಿ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು:ಜು-೧೯:ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಸಾಕಷ್ಟು ಕಾನೂನು ಹಾಗೂ ಕಾರ್ಯಕ್ರಮಗಳಿವೆ.‌ ಆದರೆ ಇದು ಸೂಕ್ತ ರೀತಿಯಲ್ಲಿ ತಲುಪುತ್ತಿಲ್ಲ. ಹೀಗಾಗಿ ಮಹಿಳಾ ಸುರಕ್ಷತೆಗೆ ಇರುವ ಕಾನೂನು , ಕಾರ್ಯಕ್ರಮ, ಸಹಾಯವಾಣಿ‌ ಎಲ್ಲವನ್ನೂ ಜಾಹಿರಾತು ಮೂಲಕ ಪರಿಣಾಮಕಾರಿಗೆ ತಲುಪುವ ರೀತಿ ಕ್ರಮ ವಹಿಸಿ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚಿಸಿದ್ದಾರೆ.

ವಿಧಾನಸೌಧ ಕಚೇರಿಯಲ್ಲಿ ಕರೆಯಲಾಗಿದ್ದ ಆ್ಯಪ್‌ ಆಧಾರಿತ ಟ್ಯಾಕ್ಸಿ ಕುರಿತ ಎರಡನೇ ಸಭೆಯಲ್ಲಿ ಪೊಲೀಸ್ ಕಮಿಷನರ್, ಡಿಜಿ ಹಾಗೂ ನಗರ ಸಂಚಾರ ಪೊಲೀಸ್ ಆಯುಕ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಆ್ಯಪ್ ಆಧಾರಿತ ಟ್ಯಾಕ್ಸಿಗಳಲ್ಲಿ ಮಹಿಳೆಯರ ಸುರಕ್ಷತೆ ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಮಹಿಳೆ ಮೇಲೆ ದೌರ್ಜನ್ಯ ಸಂಭವಿಸಬಾರದು. ರಾತ್ರಿ ವೇಳೆ ತೆರಳುವ ಮಹಿಳೆಯರಿಗೆ ಹೆಚ್ಚಿನ ಸುರಕ್ಷತೆ ಅಗತ್ಯವಿದೆ. ಇದಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲು ಕ್ರಮ ಕೈಗೊಳ್ಳಿ. ಮಹಿಳೆಯರ ಸುರಕ್ಷತೆಗೆ ಸಾಕಷ್ಟು ಕಾರ್ಯಕ್ರಮವಿದೆ. ಅದನ್ನು ಮಹಿಳೆಯರಿಗೆ ತಲುಪುವ ರೀತಿಯಲ್ಲಿ ಪರಿಣಾಮಕಾರಿ ಜಾಹಿರಾತು ಪ್ರಸಾರ ಮಾಡಿಸಿ. ನಿರ್ಭಯ ಯೋಜನೆಯಡಿ ಸಾಕಷ್ಟು ಅನುದಾನವಿದೆ. ಅದನ್ನು ಪಡೆದು ೫೦೦೦ ಸಿಸಿ ಕ್ಯಾಮರಾ, ೧ ಸಾವಿರ ದ್ವಿಚಕ್ರ ವಾಹನ, ಪೊಲೀಸ್ ವಾಹನ ಖರೀಸಿ, ಮಫ್ತಿ ಹೆಚ್ಚಿಸಿ ಮಹಿಳೆಯರಿಗೆ ಹೆಚ್ವಿನ ಸುರಕ್ಷತೆಗೆ ಆದ್ಯತೆ ನೀಡಿ ಎಂದು ಸೂಚಿಸಿದರು. ಮುಂದೆಂದೂ ಈ ರೀತಿಯ ಪ್ರಕಟಣ ದಾಖಲಾಗದಂತೆ ಎಚ್ಚರ ವಹಿಸಿ ಎಂದು ಹೇಳಿದ್ದಾರೆ.

women’s safety and advertising, Broadcast effectively,Deputy Chief Minister Dr. G. Parameshwar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ