ಪ್ರತ್ಯೇಕತೆಯ ಕೂಗು ಯಾವುದೇ ಕಾರಣಕ್ಕೂ ಸಲ್ಲದು: ಡಾ.ಜಿ.ಪರಮೇಶ್ವರ್

ಬೆಂಗಳೂರು,ಜು.26-ಅಖಂಡ ಕರ್ನಾಟಕದ ಅಭಿವೃದ್ದಿಗೆ ಸರ್ಕಾರ ಬದ್ಧವಾಗಿದೆ. ಪ್ರತ್ಯೇಕತೆಯ ಕೂಗು ಯಾವುದೇ ಕಾರಣಕ್ಕೂ ಸಲ್ಲದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದರು.

ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಬಾಡ್ಮಿಂಟನ್‍ನಲ್ಲಿ ಚಿನ್ನ ಮತ್ತು ಕಂಚು ಪದಕವನ್ನು ಗಳಿಸಿದ ಅಶ್ವಿನಿ ಪೆÇನ್ನಪ್ಪ ಅವರಿಗೆ 35 ಲಕ್ಷ ರೂ.ಗಳ ಚೆಕ್ ವಿತರಿಸಿ ಸರ್ಕಾರದ ವತಿಯಿಂದ ಗೌರವ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಉತ್ತರ ಕರ್ನಾಟಕದ ಪ್ರತ್ಯೇಕತೆಗಾಗಿ ಕರೆ ನೀಡಿರುವ ಬಂದ್‍ನ್ನು ಕೈಬಿಡಬೇಕೆಂದು ಮನವಿ ಮಾಡಿದರು. ಅಖಂಡ ಕರ್ನಾಟಕ ನಮ್ಮ ಪರಿಕಲ್ಪನೆ. ಅಖಂಡತೆಯ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ದವಾಗಿದೆ. ಉತ್ತರ ಕರ್ನಾಟಕದ , ಹೈದರಾಬಾದ್ ಕರ್ನಾಟಕ, ಹಿಂದುಳಿದವರ್ಗಗಳ ಅಭಿವೃದ್ಧಿಗೆ ನಂಜುಂಡಪ್ಪ ವರದಿಯಂತೆ 114 ತಾಲ್ಲೂಕುಗಳನ್ನು ಅಭಿವೃದ್ದಿಗೊಳಿಸಲಾಗುತ್ತಿದೆ.

371ಜೆ ಕಲಂ ಅನ್ವಯ ಆರು ಜಿಲ್ಲೆಗಳಿಗೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಹೆಚ್ಚು ಒತ್ತು ನೀಡಿದ್ದಾರೆ. ಕೃಷ್ಣ ಮೇಲ್ದಂಡೆಯ 265ಟಿಎಂಸಿ ನೀರು ಬಳಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಹೈದರಾಬಾದ್ ಕರ್ನಾಟಕ ಮಂಡಳಿ ರಚನೆ ಮಾಡಲಾಗಿದೆ. ಅಭಿವೃದ್ದಿಯನ್ನು ಕಡೆಗಣಿಸಿಲ್ಲ. ಇಂಥ ಸಂದರ್ಭದಲ್ಲಿ ಪ್ರತ್ಯೇಕತೆಯ ಮಾತು ಬರಬಾರದು ಎಂದು ಹೇಳಿದರು.

ಇದಕ್ಕೂ ಮುನ್ನ ಅಶ್ವನಿ ಪೆÇನ್ನಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು ಕಾಮನ್‍ವೆಲ್ತ್‍ನಲ್ಲಿ ಪಡೆದ ಚಿನ್ನದ ಪದಕಕ್ಕೆ 25 ಲಕ್ಷ ರೂ. ಹಾಗೂ ಕಂಚಿನ ಪದಕಕ್ಕೆ ಎಂಟು ಲಕ್ಷ ರೂ. ಸೇರಿದಂತೆ ಸರ್ಕಾರದ ವತಿಯಿಂದ ಒಟ್ಟು 33 ಲಕ್ಷಗಳ ಪರಿಹಾರದ ಚೆಕ್‍ನ್ನು ನೀಡಲಾಗಿದೆ.

ಅವರು ವಿಶ್ವಮಟ್ಟಕ್ಕೆ ತಯಾರಿ ನಡೆಸುತ್ತಿದ್ದಾರೆ. ಒಲಂಪಿಕ್ಸ್‍ನಲ್ಲೂ ಉನ್ನತ ಸಾಧನೆ ಮಾಡಲಿ. ಒಲಂಪಿಕ್‍ನಲ್ಲಿ ಚಿನ್ನದ ಪದಕಪಡೆದ ಕ್ರೀಡಾಪಟುಗಳಿಗೆ 5 ಕೋಟಿ ಬೆಳ್ಳಿಪದಕ ಪಡೆದ, ಬೆಳ್ಳಿಗೆ ಮೂರು, ಕಂಚಿಗೆ ಎರಡು ಕೋಟಿ ನೀಡಲಾಗುವುದು. ಈ ಮೂಲಕ ಕ್ರೀಡಾಪಟುಗಳನ್ನು ಪೆÇ್ರೀ ಎಂದು ಹೇಳಿದರು.
ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಪದಕ ವಿಜೇತರಿಗೆ ನೇರ ನೇಮಕಾತಿ ಮೂಲಕ ಇಲಾಖೆಗೆ ಸೇರಿಸಿಕೊಳ್ಳಲಾಗುವುದು ಎಂದು ಹೇಳಿದರು.

ಕೆಲವು ಸಚಿವರ ಕಚೇರಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಫೆÇೀಟೊ ಹಾಕಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರು ನಮ್ಮ ರಾಜ್ಯದ ಮುಖ್ಯಮಂತ್ರಿಗಳು. ಶಿಷ್ಟಾಚಾರ ಪ್ರಕಾರ ಅವರ ಫೆÇೀಟೊ ಹಾಕಬೇಕು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯವರು ಆ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಎಸಿಬಿ ರಚನೆಯಿಂದ ಲೋಕಾಯುಕ್ತ ಸಂಸ್ಥೆ ದುರ್ಬಲವಾಗಿಲ್ಲ. ಜವಾಬ್ದಾರಿಯನ್ನು ಹಂಚಲಾಗಿದೆ. ಸಿಬ್ಬಂದಿ ಬೇಕೆಂದರೆ ಹೆಚ್ಚನ ಸಿಬ್ಬಂದಿಯನ್ನು ಒದಗಿಸಿಕೊಡುವುದಾಗಿ ಅವರು ಹೇಳಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಉಪಕಾರ್ಯದರ್ಶಿಯೊಬ್ಬರು ವರ್ಗಾವಣೆಯಾಗುತ್ತಿದ್ದಂತೆ ರಾತ್ರೋರಾತ್ರಿ ಕಡತಗಳನ್ನು ಸಾಗಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಕಡತ ಕಾಣೆಯಾಗಿದೆ ಎಂಬ ಬಗ್ಗೆ ಆಯುಕ್ತರಿಂದ ವರದಿ ತರಿಸಿಕೊಳ್ಳುತ್ತೇನೆ ಎಂದರು.

The Government is committed to the development of Akhand Karnataka,Deputy Chief Minister Dr G Parameshwar, separate state of northern Karnataka,unlikely

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ