ನವದೆಹಲಿ:ಜು-19: ಅವಿಶ್ವಾಸ ನಿರ್ಣಯ ಮಂಡನೆ ವಿಷಯದಲ್ಲಿ ಸೋನಿಯಾ ಗಾಂಧಿ ಲೆಕ್ಕ ತಪ್ಪಾಗಿದೆ. ಗಣಿತದಲ್ಲಿ ಸೋನಿಯಾ ಗಾಂಧಿ ವೀಕು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಲೇವಡಿ ಮಾಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವ ಎನ್’ಡಿಎ ಸರ್ಕಾರದ ಬಳಿ ಸಂಖ್ಯಾಬಲವಿದೆ. ಬಹುಮತ ಕೂಡ ಇದೆ. ಸಂಸತ್ತಿನ ಹೊರಗೆ ಮತ್ತು ಒಳಗೆ ಎರಡೂ ಕಡೆ ನಮಗೆ ಬಹುಮತವಿದೆ. ಕೇಂದ್ರದ ವಿರುದ್ದ ಅವಿಶ್ವಾಸ ನಿರ್ಣಯವನ್ನು ಮಂಡನೆ ಮಾಡಲಾಗಿದೆ. ಎನ್’ಡಿಎ ಪಕ್ಷದ ಇತರೆ ಮೈತ್ರಿ ಪಕ್ಷಗಳು ನಮಗೆ ಬೆಂಬಲ ನೀಡಲಿದೆ ಎಂದು ಹೇಳಿದರು.
ಸೋನಿಯಾ ಗಾಂಧಿಯವರ ಲೆಕ್ಕ ತಪ್ಪಾಗಿದೆ. 1996ರಲ್ಲಿ ಹಾಕಲಾಗಿದ್ದ ಲೆಕ್ಕವನ್ನೇ ಈಗಲೂ ಮಾಡುತ್ತಿದ್ದಾರೆ. ಅಂದು ಏನಾಗಿತ್ತು ಎಂಬುದು ಎಲ್ಲರಿಗೂ ಗೊತ್ತು. ಇಂದೂ ಕೂಡ ಸೋನಿಯಾ ಅವರ ಲೆಕ್ಕ ಮತ್ತೆ ತಪ್ಪಾಗಲಿದೆ ಎಂದು ತಿಳಿಸಿದ್ದಾರೆ.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಕೆ ನಿರಾಕರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಟಿಡಿಪಿ ಪಕ್ಷಗಳು ನಿನ್ನೆಯಷ್ಟೇ ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿತ್ತು. ವಿಪಕ್ಷಗಳ ಅವಿಶ್ವಾಸ ನಿರ್ಣಯ ಮಂಡನೆಯನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಅಂಗೀಕರಿಸಿದ್ದರು. ಅಲ್ಲದೆ, ಅವಿಶ್ವಾಸ ನಿರ್ಣಯ ಮಂಡನೆ ಕುರಿತ ಚರ್ಚೆಯನ್ನು ಜುಲೈ.20 ರಂದು ಲೋಕಸಭೆಯಲ್ಲಿ, ಜು.23 ರಂದು ರಾಜ್ಯಸಭೆಯಲ್ಲಿ ನಡೆಸುವುದಾಗಿ ತಿಳಿಸಿದ್ದರು.
Monsoon Session, No Trust Vote, Ananth Kumar, Sonia Gandhi