ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ರೋಮಿಯೋಗಳ ಬಂಧನ

ಹುಬ್ಬಳ್ಳಿ,ಜು.18-ಜನನಿಬಿಡ ಪ್ರದೇಶ ಹಾಗೂ ಶಾಲಾ ಕಾಲೇಜುಗಳ ಬಗ್ಗೆ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಆರು ಮಂದಿ ರೋಡ್ ರೋಮಿಯೋಗಳನ್ನು ಉಪನಗರ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ನಗರದ ಹಳೇ ಬಸ್ ನಿಲ್ದಾಣ ಬಳಿ ಯುವತಿಯರನ್ನು ಹಾಗೂ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಶಿರಡಿನಗರದ ಸಂಜುಕುಮಾರ್, ತೊರವಿಹಕ್ಕಲ ಪ್ರವೀಣ್ ಜೈನ್, ಶಿರಾಜ್ ಅಹಮ್ಮದ್, ಶಂಕರ್ ತಲವಾಯಿ, ವಿವೇಕ ಗದಗಿ ಹಾಗೂ ವಿದ್ಯಾನಗರದ ಮಂಜುನಾಥ ಶಾಮನೂರು ಬಂಧಿತರು. ಈ ಹಿಂದೆಯೂ ಸಹ ನಗರದ ವಿವಿಧ ಕಡೆ ಚನ್ನಮ್ಮ ಪಡೆಯ ಮಹಿಳಾ ಪೆÇಲೀಸ್ ಕಾನ್‍ಸ್ಟೇಬಲ್‍ಗಳು ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಹಲವು ರೋಡ್ ರೋಮಿಯೋಗಳನ್ನು ಜೈಲಿಗೆ ಅಟ್ಟಿದ್ದರು. ಇದೀಗ ಮತ್ತೆ ಇಂತಹ ಕಾರ್ಯಾಚರಣೆ ನಡೆಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಮಹಿಳಾ ಪೆÇಲೀಸ್ ಪಡೆ ಪಾತ್ರವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ