ಸರ್ಕಾರದ ಹಣ ಪೋಲು

ತಿ.ನರಸೀಪುರ, ಜು.18-ಸರ್ಕಾರದ ಹಣ ಯಾವ್ಯಾವ ರೀತಿ ಪೆÇೀಲಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ ಇದಾಗಿದೆ. ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಗೆ ಹೊಂದಿಕೊಂಡಂತಿರುವ ವಿದ್ಯಾನಗರದಲ್ಲಿ ಇತ್ತೀಚಿಗೆ ನಡೆದ ಅವೈಜ್ಞಾನಿಕ ಕಾಮಗಾರಿಯೊಂದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
40ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ವಿದ್ಯಾನಗರದ ರಸ್ತೆಯೊಂದನ್ನು ಜಿ.ಪಂ.ಆನುದಾನದಡಿ ಸಿಮೆಂಟ ಕಾಂಕ್ರೀಟ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗಿದ್ದು,ಈ ರಸ್ತೆಯ ದುರವಸ್ಥೆ ಕಳೆದು ಉತ್ತಮ ರಸ್ತೆ ನಿರ್ಮಾಣವಾಗಿದ್ದಕ್ಕೆ ಜನ ಸಂತಸ ಪಡುತ್ತಿದ್ದಂತೆ ಮತ್ತೆ ರಸ್ತೆ ಅಧೋಗತಿಗೆ ಇಳಿದಿದೆ.
ಮಳೆ ಬಿದ್ದಾಗ ಕೆಸರು ಗದ್ದೆಯಂತಾಗುತ್ತಿದ್ದ ರಸ್ತೆಗೆ ಕಾಂಕ್ರೀಟ್ ಹಾಕಿದ್ದರಿಂದ ಕಾಲೋನಿ ಜನತೆ ನಿಟ್ಟುಸಿರು ಬಿಟ್ಟಿದ್ದರು. ಆದರೆ ರಸ್ತೆ ನಿರ್ಮಾಣವಾದ ಕೆಲವೇ ದಿನಗಳಲ್ಲಿ ಮತ್ತೆ ಜೆಸಿಬಿ ಮೂಲಕ ಕಾಂಕ್ರೀಟ್ ರಸ್ತೆ ಅಗೆದು ಒಳಚರಂಡಿ ಕಾಮಗಾರಿ ಮಾಡಿರುವುದು ಇಷ್ಟೆಲ್ಲ ಅವಾಂತರಗಳಿಗೆ ಕಾರಣ.
ಇಲಾಖೆಯವರ ಬೇಜವಾಬ್ದಾರಿತನದಿಂದ ರಸ್ತೆ ನಿರ್ಮಾಣಕ್ಕೂ ಮುನ್ನ ಆಗಬೇಕಿದ್ದ ಒಳಚರಂಡಿ ಕಾಮಗಾರಿ ಬಿಡುಗಡೆಯಾದ ಹಣ ವಾಪಸ್ ಹೋಗುತ್ತದೆಂಬ ಉದ್ದೇಶದಿಂದ ಇಲಾಖೆಯವರು ತಿಳಿದಿದ್ದೂ ಕಾಂಕ್ರೀಟ್ ರಸ್ತೆ ನಿರ್ಮಿಸಿ ಬಿಲ ಮಾಡಿಸಿಕೊಂಡಿದ್ದಾರೆ ಎಂಬ ಅನುಮಾನ ಇದೀಗ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ನೂತನವಾಗಿ ನಿರ್ಮಾಣವಾಗಿದ್ದ ಕಾಂಕ್ರೀಟ್ ರಸ್ತೆ ಅಗೆಸಿ ಒಳಚರಂಡಿ ನಿರ್ಮಾಣ ಮಾಡಿ ಅಗೆದ ಜಾಗವನ್ನು ಮಣ್ಣಿನಿಂದ ಮುಚ್ಚಿರುವುದರಿಂದ ಸುಂದರವಾಗಿ ನಿರ್ಮಾಣಗೊಂಡಿದ್ದ ರಸ್ತೆಗೆ ಇದೀಗ ಗುಂಡಿಗಳೆ ಕಪ್ಪುಚುಕ್ಕೆಯಾಗಿ ಪರಿಣಮಿಸಿವೆ. ಇಲಾಖೆಗೆ ಒಳಚರಂಡಿ ನಿರ್ಮಾಣವಾಗಿಲ್ಲದಿರುವ ಬಗ್ಗೆ ಗೊತ್ತಿದ್ದು ಸಿ.ಸಿ.ರಸ್ತೆ ನಿರ್ಮಾಣ ಮಾಡಿದ್ದೇಕೆ? ಬಂದ ಅನುದಾನ ವಾಪಸ್ ಹೋಗುತ್ತದೆಂದು ಗುತ್ತಿಗೆದಾರನೊಂದಿಗೆ ಶಾಮೀಲಾಗಿ ಇಲಾಖೆ ಮುಖ್ಯಸ್ಥರು ಬಿಲï ಪಾಸ್ ಮಾಡಿಸಿಕೊಡರೇ? ಗುಂಡಿ ಬಿದ್ದ ಕಾಂಕ್ರೀಟ್ ರಸ್ತೆಯ ನಿರ್ವಹಣೆ ಹೊಣೆ ಯಾರದು?ಎಂಬಿತ್ಯಾದಿ ಪ್ರಶ್ನೆಗೆ ಇಲಾಖೆಯವರು ಉತ್ತರಿಸಬೇಕಿದೆ. ಒಟ್ಟಾರೆ ರಸ್ತೆಗೆ ಕಾಂಕ್ರೀಟ್ ಹಾಕಿ ಮತ್ತೆ ಅಗೆದು ಯುಜಿಡಿ ನಿರ್ಮಾಣ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಗೊಂದಲ ಸಾರ್ವಜನಿಕರನ್ನು ಕಾಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ