ಜಮ್ಮು: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ಆಧಾರ ಸ್ತಂಭ ಎಂದು ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ಸೋಮವಾರ ಹಾಡಿ ಹೊಗಳಿದ್ದಾರೆ.
‘ಮಹಿ ಭಾರತ ತಂಡದ ಆಧಾರ ಸ್ತಂಭವಿದ್ದಂತೆ. ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ಅವರು ನೀಡುವ ಮಾರ್ಗದರ್ಶನ ಶ್ಲಾಘನೀಯ’ ಎಂದು ಪಠಾಣ್ ಯುಎನ್ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇರ್ಫಾನ್ ಪಠಾಣ್ ಅವರು ಮುಂಬರುವ ದೇಶಿ ಕ್ರಿಕೆಟ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಪ್ರತಿನಿಧಿಸುತ್ತಿದ್ದು, ಕಣಿವೆ ರಾಜ್ಯದ ಕ್ರಿಕೆಟಿಗರ ತರಬೇತಿಗೂ ಸಹಾಯ ಮಾಡಲಿದ್ದಾರೆ.
ಇದೇ ವೇಳೆ ಟೀಂ ಇಂಡಿಯಾದಲ್ಲಿ ಉತ್ತಮ ನಾಯಕತ್ವದ ಬಗ್ಗೆ ಪ್ರತಿಕ್ರಿಯಿಸಿದ ಇರ್ಫಾನ್ ಪಠಾಣ್, ಕ್ಯಾಪ್ಟನ್ ಗಳ ಮಧ್ಯೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ನಾನು ಎಲ್ಲಾ ನಾಯಕರ ಜೊತೆ ಆಟವಾಡಿದ್ದೇನೆ. ಒಬ್ಬೊಬ್ಬ ನಾಯಕರ ಅವಧಿಯೂ ಭಿನ್ನವಾಗಿರುತ್ತದೆ ಎಂದರು.