ಹಣೆಗೆ ಬಿಂದಿ ಇಟ್ಟುಕೊಂಡಿದ್ದಕ್ಕೆ ಆಕ್ಷೇಪ.. ಬಾಲಕಿ ಮದರಾಸದಿಂದಲೇ ಔಟ್…!

ತಿರುವನಂತಪುರಂ: ಹಣೆಗೆ ಬಿಂದಿ ಇಟ್ಟುಕೊಂಡು ಶಾರ್ಟ್ ಫಿಲ್ಮ್ ನಲ್ಲಿ ನಟಿಸಿದ 5ನೇ ತರಗತಿಯ ಮುಸ್ಲಿಂ ಬಾಲಕಿಯನ್ನು ಶಾಲೆಯಿಂದ ಹೊರ ಹಾಕಲಾಗಿದೆ. ಘಟನೆ ಬಗ್ಗೆ ಬಾಲಕಿ ತಂದೆ ಮಾಡಿರುವ ಫೇಸ್ ಬುಕ್ ಪೋಸ್ಟ್ ಸಂಚಲನ ಮೂಡಿಸಿದ್ದು, ತೀವ್ರ ಚರ್ಚೆಗೆ ಗುರಿಯಾಗಿದೆ
ಉತ್ತರ ಕೇರಳದ ಮದರಾಸವೊಂದು ತನ್ನ ವಿದ್ಯಾರ್ಥಿ ಮೇಲೆ ಕ್ರಮ ಕೈಗೊಂಡಿದೆ. 5ನೇ ತರಗತಿಯ 10 ವರ್ಷದ ಮುಸ್ಲಿಂ ಬಾಲಕಿ ನಟನೆಯ ಅಸೈನ್ಮೆಂಟ್ ಸಲುವಾಗಿ ಶಾರ್ಟ್ ಮೂವಿಯಲ್ಲಿ ನಟಿಸಿದ್ದಳು. ಪಾತ್ರಕ್ಕೆ ತಕ್ಕಂತೆ ಮಲೆಯಾಳಿಗಳ ಪ್ರಸಿದ್ಧ ಚಂದನದ ಬಿಂದಿಯನ್ನು ಹಣೆಗೆ ಇಟ್ಟುಕೊಂಡಿದ್ದಳು. ಇದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮದರಾಸ, ಬಾಲಕಿಯನ್ನು ಅಮಾನುಷವಾಗಿ ಶಾಲೆಯಿಂದ ಹೊರ ಹಾಕಿದೆ. ಬಿಂದಿ ಇಡುವುದು ಶರಿಯತ್ ಕಾನೂನಿನಲ್ಲಿ ನಿಷೇಧ ಇರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ.
ಮುಗ್ಧ ಬಾಲಕಿಯ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ತಂದೆ ಫೇಸ್ಬುಕ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೈಕ್ಷಣಿಕವಾಗಿ, ಪಠ್ಯೇತರ ಚಟುವಟಿಗಳಲ್ಲೂ ಉತ್ತಮ ಸಾಧನೆ ತೋರಿದ್ದ ಬಾಲಕಿಯನ್ನು ಬಿಂದಿಯ ಕಾರಣಕ್ಕೆ ಶಾಲೆಯಿಂದ ಹೊರ ಹಾಕಿದ್ದಾರೆ. ಬಿಂದಿ ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿದೆ ಎಂದು ಮದರಸಾ ಕ್ರಮ ಕೈಗೊಂಡಿದೆ ಎಂದು ತಂದೆ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ಕಂಡು ಬಂದಿದ್ದು, ಸಾವಿರಾರು ಮಂದಿ ಬಾಲಕಿಯ ತಂದೆಗೆ ಬೆಂಬಲ ಸೂಚಿಸಿದ್ದಾರೆ. ಬಾಲಕಿ ತಂದೆಯ ಪೋಸ್ಟ್ ವೈರಲ್ ಆಗಿದ್ದು, 2.700 ಮಂದಿ ಶೇರ್ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ