ದಾವಣಗೆರೆ, ಜು.4- ನಿಧಿ ಸಿಕ್ಕಿರುವುದಾಗಿ ನಂಬಿಸಿ ನಕಲಿ ಬಂಗಾರ ಕೊಟ್ಟು ಹಣ ಪಡೆದು ವಂಚಿಸಿದ್ದ ಇಬ್ಬರನ್ನು ಹೊನ್ನಾಳಿ ಪೆÇಲೀಸರು ಬಂಧಿಸಿದ್ದಾರೆ. ಚನ್ನಗಿರಿ ತಾಲೂಕಿನ ಚಿಕ್ಕ ಕುರುಬರಹಳ್ಳಿ ವಾಸಿ ಆರ್.ವೆಂಕಟೇಶ್ (30) ಹಾಗೂ ಚಿಕ್ನಬೆನ್ನೂರು ನಿವಾಸಿ ಮಂಜಪ್ಪ (28) ಬಂಧಿತ ಆರೋಪಿಗಳು.
ಈ ಆರೋಪಿಗಳು 2017ರ ಜುಲೈ, ಆಗಸ್ಟ್ ತಿಂಗಳಲ್ಲಿ ತಮಿಳುನಾಡು ರಾಜ್ಯದ ಕಡಲೂರು ಜಿಲ್ಲೆಯ ಸಿ.ರಾಜ್ಕುಮಾರ್ ಎಂಬುವವರಿಗೆ ಮೊಬೈಲ್ ಕರೆ ಮಾಡಿ ಅಪಾರ ಪ್ರಮಾಣದ ನಿಧಿ ಸಿಕ್ಕಿದೆ ಕೊಡುತ್ತೇವೆ ಬನ್ನಿ ಎಂದು ಪದೇ ಪದೇ ಒತ್ತಾಯ ಮಾಡಿದ್ದರು. ಕಡೆಗೆ ಶಿವಮೊಗ್ಗ ತಾಲೂಕು ಮಾಚೆನಹಳ್ಳಿ ಗ್ರಾಮದ ಬಳಿಗೆ ಸಿ.ರಾಜ್ಕುಮಾರ್ನನ್ನು ಆರೋಪಿಗಳು ಕರೆಸಿಕೊಂಡರು. ಅಲ್ಲಿಂದ ಕಾರಿನಲ್ಲಿ ನ್ಯಾಮತಿ ತಾಲೂಕು ಬೇಲೂರು ಗ್ರಾಮದ ಪೆಟ್ರೋಲ್ ಬಂಕ್ ಹತ್ತಿರ ಕರೆದೊಯ್ದ ಆರೋಪಿಗಳು ನಿಧಿ ಎಂದು ನಂಬಿಸಿ ನಕಲಿ ಬಂಗಾರ ಕೊಟ್ಟು 12 ಲಕ್ಷ ರೂ. ಪಡೆದುಕೊಂಡಿದ್ದರು. ರಾಜ್ಕುಮಾರ್ ತನ್ನ ಊರಿಗೆ ತೆರಳಿ ಆಭರಣದ ಅಂಗಡಿಗೆ ಹೋಗಿ ತೋರಿಸಿದಾಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಮತ್ತೆ ನ್ಯಾಮತಿಗೆ ಬಂದ ರಾಜ್ಕುಮಾರ್ ಆರೋಪಿಗಳಿಬ್ಬರ ವಿರುದ್ಧ ಪೆÇಲೀಸರಿಗೆ ದೂರು ನೀಡಿ ಹೋಗಿದ್ದರು. ದಾವಣಗೆರೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಅವರು ಅಡಿಷನಲ್ ಎಸ್ಪಿ ಉಮೇಶ್, ಗ್ರಾಮಾಂತರ ಡಿವೈಎಸ್ಪಿ ಎಂ.ಕೆ.ಗಂಗಲ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಹೊನ್ನಾಳಿ ಸಿಪಿಐ ಜೆ.ರಮೇಶ್, ನ್ಯಾಮತಿ ಠಾಣೆ ಪಿಎಸ್ಐ ಹನುಮಂತಪ್ಪ ಶೀರಳ್ಳಿ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ 10 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.