ಕಳ್ಳತನ ಬೇಧಿಸಿದ ಪೆÇಲೀಸರು ಆರೋಪಿಗಳ ಬಂಧನ

ಚನ್ನಪಟ್ಟಣ, ಜು.4- ತಿಂಗಳ ಹಿಂದೆ ಮನೆಯ ಬಾಗಿಲು ಹೊಡೆದು ಒಳನುಗ್ಗಿ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣ ಬೇಧಿಸಿರುವ ಗ್ರಾಮಾಂತರ ಠಾಣೆ ಪೆÇಲೀಸರು ಆರೋಪಿಯನ್ನು ಬಂಧಿಸಿ 125 ಗ್ರಾಂ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ನವೀನ್‍ಕುಮಾರ್ (26) ಬೆಂಗಳೂರಿನ ಕೆಂಗೇರಿ ಬಳಿಯ ಮಾರುತಿನಗರ ಸೊಣ್ಣೇನಹಳ್ಳಿಯ ರಾಜಣ್ಣ ಎಂಬುವರ ಮಗನಾದ ಈತ 2018 ಜೂ.29ರಲ್ಲಿ ತಾಲ್ಲೂಕಿನ ಗೋವಿಂದೇಗೌಡನ ದೊಡ್ಡಿಯ ತಿಮ್ಮೇಗೌಡರ ಮಗ ಯೋಗೀಶ್ ಎಂಬುವರ ಮನೆ ಬಾಗಿಲು ಹೊಡೆದು ಕಳವು ನಡೆಸಿದ್ದ. ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ದೂರುದಾಖಲಾಗಿತ್ತು. ಠಾಣೆಯ ಪಿಎಸ್‍ಐ ವಸಂತ್‍ಕುಮಾರ್ ಸಿಬ್ಬಂದಿಗಳಾದ ರಾಮಕೃಷ್ಣ ಸಿದ್ದರಾಜು ಮಲ್ಲಿಕಾರ್ಜುನ ಸಿದ್ದಗಂಗಪ್ಪ ಆಸ್ಲಂಖಾನ್ ಕಳವು ಪ್ರಕರಣದಲ್ಲಿ ಹಲವಾರು ಮಾಹಿತಿ ಕಲೆಹಾಕಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಮೂರು ಲಕ್ಷರೂ. ಮೌಲ್ಯದ 125 ಗ್ರಾಂ ಚಿನ್ನಾಭರಣ ಹಾಗೂ 90 ಸಾವಿರ ಮೌಲ್ಯದ ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ