ಲವ್ ಜಿಹಾದ್; ಕಠಿಣ ಕಾನೂನು ಕ್ರಮಕ್ಕೆ ತೇಜಸ್ವಿನಿಗೌಡ ಆಗ್ರಹ

 

ಬೆಂಗಳೂರು, ಜು.4- ಕೇರಳದ ಕೊಚ್ಚಿಯಿಂದ ಯುವತಿಯನ್ನು ಕರೆತಂದು ಲವ್ ಜಿಹಾದ್ ನಡೆಸಿದ ಪ್ರಕರಣವನ್ನು ಮೇಲ್ಮನೆಯಲ್ಲಿ ಪ್ರಸ್ತಾಪಿಸಿದ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು.
ನಿಯಮ-22ರಡಿ ವಿಷಯ ಪ್ರಸ್ತಾಪಿಸಿದ ಅವರು, ಲವ್ ಜಿಹಾದ್ ಹೆಸರಿನಲ್ಲಿ ನಜೀರ್‍ಖಾನ್ ಎಂಬುವವರು ಹಿಂದೂ ಯುವತಿಯನ್ನು ಕೇರಳದ ಕೊಚ್ಚಿಯಿಂದ ಕರೆತಂದು ಲವ್ ಜಿಹಾದ್ ಮೂಲಕ ಮತಾಂತರ ಮಾಡಿ ಅನ್ಯಾಯವೆಸಗಿ, ಅತ್ಯಾಚಾರ ಮಾಡಿ ದುಬೈನವರಿಗೆ ಮಾರಾಟ ಮಾಡಿರುವುದು ಮಾಧ್ಯಮಗಳಲ್ಲಿ ಬಹಿರಂಗವಾಗಿದೆ.
ಅಲ್ಲದೆ, ಈ ಪ್ರಕರಣದಲ್ಲಿ ನಮ್ಮ ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತರ ಪತ್ನಿಯೊಬ್ಬರ ಹೆಸರು ಕೇಳಿಬಂದು ಎನ್‍ಐಎ ಸಂಸ್ಥೆ ವಿಚಾರಣೆ ನಡೆಸಿದೆ.
ಇಂತಹ ಹಲವು ಪ್ರಕರಣಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಗಳಾಗಿದ್ದು, ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಲಾಗಿದೆ. ಕಠಿಣ ಕಾನೂನು ಕ್ರಮಗಳ ಮೂಲಕ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಇದು ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಂದ ಉತ್ತರ ಕೊಡಿಸುವ ಭರವಸೆಯನ್ನು ಸಭಾನಾಯಕಿ ಜಯಮಾಲಾ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ