100ನೇ ಟಿ 20: ಐರ್ಲೆಂಡ್ ವಿರುದ್ಧ ಭಾರತಕ್ಕೆ 76 ರನ್ ಅಮೋಘ ಜಯ

ಡಬ್ಲಿನ್: ಟೀಂ ಇಂಡಿಯಾ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ 76 ರನ್ ಗಳ ಭೂತಪೂರ್ವ ಜಯ ದಾಖಲಿಸಿದೆ. ನೂರನೇ ಟಿ 20 ಆಡುತ್ತಿರುವ ಭಾರತ ತಂಡ ಐಸಿಸಿ ಟ್ವೆಂಟಿ-20 ರ‍್ಯಾಂಕಿಂಗ್‌ನಲ್ಲಿ 17ನೇ ಸ್ಥಾನದಲ್ಲಿರುವ ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ರೋಹಿತ್ ಶರ್ಮಾ (97) ಹಾಗೂ ಶಿಖರ್ ಧವನ್ (74) ಅದ್ಭುತ ಆಟದ ಮೂಲಕ ನಿಗದಿತ ಇಪ್ಪತ್ತು ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 208 ರನ್ ಕಲೆ ಹಾಕಿದ್ದ ಭಾರತ ಐರ್ಲೆಂಡ್ ತಂಡವನ್ನು ತನ್ನ ಮಾರಕ ಬೌಲಿಂಗ್ ದಾಳಿಯಿಂದ ಕಟ್ಟಿ ಹಾಕಿತ್ತು.
ಇನ್ನುಳಿದಂತೆ ಸುರೇಶ್ ರೈನಾ (10) ಹಾಗೂ ಮಹೇಂದ್ರ ಸಿಂಗ್ ಧೋನಿ (11) ವಿರಾಟ್ ಕೊಹ್ಲಿ (0) ಹಾಗೂ ಹಾರ್ದಿಕ್ ಪಾಂಡ್ಯ ಕಡೆ ಎಸೆತಕ್ಕೆ ಸಿಕ್ಸರ್ ಸಿಡಿಸಿದ್ದಾರೆ.
ಭಾರತದ ಕುಲ್‌ದೀಪ್ ಯಾದವ್ (21ಕ್ಕೆ 4) ಹಾಗೂ ಯುಜ್ವೇಂದ್ರ ಚಹಲ್ (38ಕ್ಕೆ 3) ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ್ದರು.
ಐರ್ಲೆಂಡ್ ಪರವಾಗಿ ಜೇಮ್ಸ್‌ ಶಾನನ್‌ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಲ್ಲದೆ  29 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಸಾಧನೆ ಮಾಡಿದ್ದರು. ಇವರು ಒಟ್ಟು 5 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 60 ರನ್ ಕಲೆಹಾಕಿದ್ದರು.
ಆದರೆ ಐರ್ಲೆಂಡ್ ಪರ ಆಡಿದ್ದ ಇನ್ನಾವ ಆಟಗಾರರೂ ಇವರಿಗೆ ಸಾಥ್ ನೀಡಲಿಲ್ಲ.  ಪಾಲ್‌ ಸ್ಟಿರ್ಲಿಂಗ್‌ (1),  ಆ್ಯಂಡ್ರ್ಯೂ ಬಾಲ್ಬಿರ್ನಿ (11),  ಸಿಮಿ ಸಿಂಗ್ (7), ನಾಯಕ ಗ್ಯಾರಿ ವಿಲ್ಸನ್‌ (5), ಓ’ಬ್ರಿಯೆನ್‌ (10), ಸ್ಟುವರ್ಟ್‌ ಥಾಂಪ್ಸನ್‌ (12), ಸ್ಟುವರ್ಟ್‌ ಪೋಯ್ಟಂರ್‌ (7), ಜಾರ್ಜ್‌ ಡಾಕ್‌ರೆಲ್‌ (9), ಬಾಯ್ಡ್‌ ರಾರ‍ಯಂಕಿನ್‌ (5*) ಮತ್ತು ಪೀಟರ್ ಚೇಸ್‌ಗೆ (2*) ಗಳಿಸಿ ಪೆವಿಲಿಯನ್ ಸೇರಿದ್ದರು.
ಐರ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 132 ರನ್ ಗಳಿಸುವಲ್ಲಿ ಆಟ ಕೊನೆಗೊಂಡಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ