
ರಾಜಕೀಯದ ಜತೆಗೆ ಬಾಲಿವುಡ್ನಲ್ಲಿ ಮಿಂಚಲು ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ರೆಡಿಯಾಗಿದ್ದಾರೆ.
ತೇಜ್ ಪ್ರತಾಪ್ ನಟಿಸುತ್ತಿರುವ ಚಿತ್ರಕ್ಕೆ ರುದ್ರ; ದಿ ಅವತಾರ್ ಎಂದು ಹೆಸರಿಡಲಾಗಿದೆ. 29 ವರ್ಷದ ಮಾಜಿ ಆರೋಗ್ಯ ಸಚಿವ ತೇಜ್ ಪ್ರತಾಪ್ ತಮ್ಮ ಚಿತ್ರದ ಪೋಸ್ಟರ್ ಅನ್ನು ಟ್ವೀಟರ್ ಖಾತೆಯಲ್ಲಿ ಬಿಡುಗಡೆ ಮಾಡಿದ್ದಾರೆ.
ತೇಜ್ ಪ್ರತಾಪ್ ಗೆ ಇದೇ ಮೊದಲ ಚಿತ್ರವಲ್ಲ. ಇದಕ್ಕೂ ಮುನ್ನ 2016ರಲ್ಲಿ ಬಿಡುಗಡೆಯಾದ ಭೋಜ್ ಪುರಿ ‘ಅಪಹರಣ್ ಉದ್ಯೋಗ್’ ಚಿತ್ರದಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿ ನಟಿಸಿದ್ದರು.
ಕಳೆದ ತಿಂಗಳಲ್ಲಿ ತೇಜ್ ಪ್ರತಾಪ್ ಯಾದವ್ ಐಶ್ವರ್ಯ ಎಂಬುವರ ಜತೆ ವಿವಾಹವಾಗಿದ್ದರು.