ನನ್ನ ನಿರ್ಧಾರಕ್ಕೆ ಬದ್ಧನಾಗಿದ್ದೇನೆ: ವಿಚ್ಛೇದನ ಅರ್ಜಿ ಹಿಂಪಡೆದ ವದಂತಿಗೆ ತೆರೆಯೆಳೆದ ತೇಜ್ ಪ್ರತಾಪ್

ನವದೆಹಲಿ: ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ ಪುತ್ರ ತೇಜ್‌ ಪ್ರತಾಪ್‌ ಯಾದವ್‌, ನನ್ನ ಜೀವವಿರುವವರೆಗೂ ನ್ಯಾಯಕ್ಕಾಗಿ ಹೋರಾಡುತ್ತೇನೆ ಎಂದು ಹೇಳುವ ಮೂಲಕ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದಾರೆ ಎನ್ನುವ ಸುದ್ದಿಗೆ ತೆರೆ ಎಳೆದಿದ್ದಾರೆ.

ಬಿಹಾರದ ಮಾಜಿ ಆರೋಗ್ಯ ಸಚಿವರಾಗಿರುವ ತೇಜ್‌ ಪ್ರತಾಪ್ ಅವರು ಪಾಟ್ನಾ ಸಿವಿಲ್‌ ಕೋರ್ಟ್‌ ಆವರಣದ ಉಮಾ ಶಂಕರ್‌ ದ್ವಿವೇದಿ ಅವರ ಕೌಟೌಂಬಿಕ ನ್ಯಾಯಾಲಯಕ್ಕೆ ಹಾಜರಾಗಿ ವಿಚ್ಛೇದನ ನೀಡುವಂತೆ ಮನವಿ ಮಾಡಿದರು. ನ್ಯಾಯಾಲಯವು ಪತ್ನಿ ಐಶ್ವರ್ಯ ರಾಯ್‌ ಅವರಿಗೆ ಜನವರಿ 8, 2019ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದೆ.

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತೇಜ್‌ ಪ್ರತಾಪ್‌, ನನ್ನ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ನನ್ನ ಕೊನೆಯುಸಿರುರುವರೆಗೂ ನ್ಯಾಯಕ್ಕಾಗಿ ಹೋರಾಡುತ್ತೇನೆ ಎಂದು ಹೇಳಿದ್ದಾರೆ.

29 ವರ್ಷದ ತೇಜ್‌ ಪ್ರತಾಪ್‌ ಯಾದವ್‌ ಅವರು ಮೇ 12, 2017 ರಂದು ಆರ್​ಜಿಡಿ ಶಾಸಕ ಚಂದ್ರಿಕಾ ಪ್ರಸಾದ್​ ರಾಯ್​ ಅವರ ಪುತ್ರಿ ಐಶ್ವರ್ಯ ರಾಯ್​ ಅವರನ್ನು ವರಿಸಿದ್ದರು. ನ. 2ರಂದು ಪಾಟ್ನಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದರು.

Tej pratap yadav,Divorce case,RJD,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ