ಕರ್ನಾಟಕ, ಒಡಿಶಾಗಳಲ್ಲಿ ಹೆಚ್ಚುವರಿ ತೈಲ ಸಂಗ್ರಹಾಗಾರಕ್ಕೆ ಕೇಂದ್ರ ಸಂಪುಟ ಅಸ್ತು

ನವದೆಹಲಿ: ಒಡಿಶಾ ಮತ್ತು ಕರ್ನಾಟಕದಲ್ಲಿ ಹೆಚ್ಚುವರಿ 6.5 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ಸಾಮರ್ಥ್ಯದ ಪೆಟ್ರೋಲಿಯಂ ಸಂಗ್ರಹಾಗಾರ ಸ್ಥಾಪನೆ ಪ್ರಸ್ತಾವನೆಗೆ ಕೇಂದ್ರ  ಸಚಿವ ಸಂಪುಟ ಅನುಮೋದನೆ ನೀಡಿದೆ.
ಒಡಿಶಾದ ಚಂಡಿಖೋಲ್ ಮತ್ತು ಕರ್ನಾಟಕದ ಪಾದೂರುಗಳಲ್ಲಿ ಸಿಂಗಲ್ ಪಾಯಿಂಟ್ ಮೂರಿಂಗ್ ವುಳ್ಳ ಎರಡು ತೈಲ ಸಂಗರಹಾಗಾರಗಳ ಸ್ಥಾಪನೆಯು ಈ ಪ್ರಸ್ತಾವನೆಯಲ್ಲಿದೆ. ಚಂಡಿಖೋಲ್ ಹಾಗೂ ಪಾದೂರುಗಳಲ್ಲಿ ನಿರ್ಮಾಣವಾಗಲಿರುವ ತೈಲ ಸಂಗ್ರಹಾಗಾರಗಳು ಭೂಗತ ತೈಲ ಸಂಗ್ರಹಾಗಾರಗಳಾಗಿರಲಿದೆ. ಕ್ರಮವಾಗಿ 4 ಎಂಎಂಟಿ ಮತ್ತು 2.5 ಎಂಎಂಟಿ ಸಾಮರ್ಥ್ಯಗಳನ್ನು ಹೊಂದಲಿದೆ.
2017-18ರವರೆಗೆ ಬಜೆಟ್ ಪ್ರಕಟಣೆ ಸಮಯದಲ್ಲಿ ಎರಡೂ ರಾಜ್ಯಗಳಲ್ಲಿ ಎರಡು ಹೆಚ್ಚುವರಿ ತೈಲ ಸಂಗ್ರಹಾಗಾರ ಸ್ಥಾಪನೆಗೆ ಕೇಂದ್ರವು ಘೋಷಣೆ ಮಾಡಿತ್ತು. ಈ ತೈಲ ಸಂಗ್ರಹಾಗಾರಗಳು ಕರ್ನಾಟಕ ಹಾಗೂ ಒಡಿಶಾಗಳಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಕ್ಕೆ ಕಾರಣವಾಗಲಿದೆ.
ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ ಈಗಾಗಲೇ ವಿಶಾಖಪಟ್ಟಣಂ (1.33 ಎಎಂಟಿ), ಮಂಗಳೂರು (1.5 ಎಮ್ಎಮ್ಟಿ) ಮತ್ತು ಪಾದೂರು(2.5 ಎಮ್ಎಮ್ಟಿ) ಗಳಲ್ಲಿ ಭೂಗತ ತೈಲ ಸಂಗ್ರಹಾಗಾರಗಳ ನಿರ್ಮಾಣ ಮಾಡಿದೆ.
ತೈಲ ಸಂಗ್ರಹಾಗಾರ ಸ್ಥಾಪನೆಯ ಒಂದನೇ ಹಂತದಲ್ಲಿ ಒಟ್ಟು 5.33 ಎಮ್ಎಮ್ಟಿ ಸಾಮರ್ಥ್ಯವುಳ್ಳ ಸಂಗ್ರಹಾಗಾರ ನಿರ್ಮಾಣವಾಗಲಿದ್ದು ಇದರಿಂದ ಭಾರತದಲ್ಲಿ 10 ದಿನಗಳ ಕಚ್ಚಾ ತೈಲ ಅವಶ್ಯಕತೆಗಳ ಪೂರೈಕೆ ಮಾಡಬಹುದಾಗಿದೆ ಎಂದು ಅಂದಾಜಿಸಲಾಗಿದೆ.ಹೆಚ್ಚುವರಿ 6.5 ಎಂಎಂಟಿ ತೈಲ ಸಂಗ್ರಹಾಗಾರ ಸ್ಥಾಪನೆಯು ಸುಮಾರು 12 ದಿನಗಳ ಹೆಚ್ಚುವರಿ ಕಚ್ಚಾ ತೈಲ ಪೂರೈಕೆಯನ್ನು. ಖಾತ್ರಿಗೊಳಿಸಲಿದೆ. ಇದು ಭಾರತದ ಇಂಧನ ಸಾಮರ್ಥುಅವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ