ಹುಬ್ಬಳ್ಳಿ- ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರೋಬ್ಬರ ಮನೆ ಮುಂದೆ ವಾಮಾಚಾರ ಮಾಡಿದ ಘಟನೆ ಹುಬ್ಬಳ್ಳಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ. ಧಾರವಾಡ ಜಿಲ್ಲಾ ಪಂಚಾಯತಿ ಎಂ.ಬಿ. ಪಾಟೀಲ್ ಎಂಬುವರ ನಿವಾಸದ ಎದುರು ವಾಮಾಚಾರ ಮಾಡಿ ಹೋಗಿದ್ದಾರೆ. ಮರದಲ್ಲಿ ಮೂರು ಗೊಂಬೆಗಳನ್ನು ಇಟ್ಟು ಅವುಗಳ ಮುಂದೆ ಹೂ ಹಾಗೂ ಹತ್ತಿ ಹಾರ ಹಾಕಿ ಪೂಜೆ ಸಲ್ಲಿಸಿ ಇಟ್ಟು ಹೋಗಿದ್ದಾರೆ. ಇದು ಪಾಟೀಲ್ ಅವರ ಕುಟುಂಬದಲ್ಲಿ ಆತಂಕವನ್ನುಂಟು ಮಾಡಿದೆ. ರಾಜಕೀಯ ವೈಷಮ್ಯದಿಂದ ಈ ಕೃತ್ಯ ಎಸಗಿ ಹೋಗಿದ್ದಾರೆ ಎನ್ನಲಾಗಿದೆ. ಎಂ.ಬಿ ಪಾಟೀಲ್ ಕಾಂಗ್ರೆಸ್ ಮುಖಂಡ ಹಾಗೂ ಜಿಪಂ ಮಾಜಿ ಅಧ್ಯಕ್ಷರಾಗಿದ್ದಾರೆ. ಎಂ.ಬಿ ಪಾಟೀಲ್ ಅವರ ಮಗ ತಮ್ಮನಗೌಡರ ಮೇಲಿನ ದ್ವೇಷಕ್ಕೆ ವಾಮಾಚಾರ ಮಾಡಿದ್ದಾರೆ ಎನ್ನಲಾಗಿದೆ. ತಮ್ಮನಗೌಡರ ಗೆಳೆಯರ ಬಳಗ ಸಂಘ ಮಾಡಿಕೊಂಡು ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ
ಕಾಂಗ್ರೆಸ್ ಶಾಸಕ ಸಿ.ಎಸ್ ಶಿವಳ್ಳಿ ಗೆಲುವಿಗೆ ಶ್ರಮಿಸಿದ್ದರು. ಹಾಗಾಗಿ ಅವರ ಮನೆ ಮುಂದೆ ವಾಮಾಚಾರ ಮಾಡಲಾಗಿದೆ ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.