ಬೆಂಗಳೂರಿನ ಓಟೋಕೇರ್‍ ನಿಂದ ಹೊಸ ಮಾದರಿಯ ಪರಿಸರ ಸ್ನೇಹಿ ಆಟೋ ಕೇರ್

ಬೆಂಗಳೂರು, 27th ಜೂನ್ 2018 – ಬೆಂಗಳೂರಿನ ಆಟೋಮೋಟಿವ್ ಆಫ್ಟರ್ ಮಾರ್ಕೆಟ್ ಸಂಸ್ಥೆ ಓಟೋಕೇರ್, ಇಂದು 50ಕ್ಕೂ ಹೆಚ್ಚು ಉತ್ಪನ್ನಗಳನ್ನು ಬಿಡುಗಡೆ ಮಾಡಿತು.ಹವಾನಿಯಂತ್ರಕದಿಂದ ಆರಂಭಿಸಿ ನೀರು ಬಳಸದೆ ಕಾರು ಸ್ವಚ್ಚಗೊಳಿಸುವ ಯಂತ್ರಗಳನ್ನು ಬಿಡುಗಡೆ ಮಾಡಲಾಯಿತು.

ಬೃಹತ್ ನಗರಗಳಲ್ಲಿ ಜನಸಂಖ್ಯೆ ಅವ್ಯಾಹತವಾಗಿ ಹೆಚ್ಚುತ್ತಿರುವುದರಿಂದ ಭಾರತದಲ್ಲಿ ನೀರು ಸಂರಕ್ಷಣೆ ಬಹುದೊಡ್ಡ ಸವಾಲಾಗಿದೆ. ದೇಶದ ಕೆಲಭಾಗಗಳಲ್ಲಿ ಇತ್ತೀಚೆಗೆ ಕಂಡು ಬಂದ ಬರಗಾಲವೇ ನೀರಿನ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಈ ನೀರು ರಹಿತ ಕಾರು ಸ್ವಚ್ಚಗೊಳಿಸುವ ಯಂತ್ರ ನೀರು ದುರ್ಬಳಕೆ ತಡೆಯುವ ಸಂದೇಶ ನೀಡುತ್ತಿದೆ. ಇದರ ಬಳಕೆಯಿಂದ ಕಾರು ಸ್ವಚ್ಚಗೊಳಿಸಲು ಬಳಕೆಯಾಗುವ ನೀರನ್ನು ಸಂರಕ್ಷಿಸಬಹುದಾಗಿದೆ

ವಾಹನಗಳನ್ನು ಸ್ವಚ್ಚಗೊಳಿಸುವ, ಅವುಗಳ ಬಾಳಿಕೆಯನ್ನು ವರ್ಧಿಸುವ ಹಾಗೂ ಸಂರಕ್ಷಿಸುವುದು ಸೇರಿದಂತೆ ಮೂರು ಹೊಸ ಮಾದರಿಯ ಯಂತ್ರಗಳನ್ನು ಬಿಡುಗಡೆಗೊಳಿಸಿದ್ದು, ಅದರ ಮಾದರಿಯ ಆಧಾರದ ಮೇಲೆ ದರ ನಿಗದಿಗೊಳಿಸಲಾಗಿದೆ. ಮಾರುಕಟ್ಟೆಗೆ ಉತ್ತಮ ಗುಣಮಟ್ಟದ ಮಾದರಿಯ ಯಂತ್ರಗಳನ್ನು ಪರಿಚಯಿಸುವ ಮೂಲಕ ಸಂಸ್ಥೆ, ದಕ್ಷಿಣ ಭಾರತದಲ್ಲಿ ಕೈಗೆಟಕುವ ದರದಲ್ಲಿ ಆಟೋಕೇರ್ ಸೊಲ್ಯೂಷನ್‍ಗಳನ್ನು ಒದಗಿಸಲು ಬದ್ಧವಾಗಿದೆ.

ಓಟೋಕೇರ್ ಉತ್ಪನ್ನಗಳು ಉತ್ತಮ ಗುಣಮಟ್ಟ ಹಾಗೂ ಉಪಯುಕ್ತಕತೆ ಹೊಂದಿರುವ ಜೊತೆಗೆ ಪರಿಸರ ಸ್ನೇಹಿಯಾಗಿವೆ. ಸ್ವಚ್ಚತೆಯ ವಲಯದಲ್ಲಿ, ನೀರು ರಹಿತ ನೊರೆಯಿಂದ ಕಾರು ಸ್ವಚ್ಚಗೊಳಿಸುವ ಯಂತ್ರ, ಇತರ ಕಾರುಗಳನ್ನು ಸ್ವಚ್ಚಗೊಳಿಸಲು ಬಳಸುವ ನೀರಿಗಿಂತ ಅತ್ಯಂತ ಕಡಿಮೆ ನೀರು ಬಳಕೆ ಮಾಡುತ್ತದೆ. ಓಟೋಕೇರ್ ಹಸಿರು ಜಗತ್ತು ನಿರ್ಮಿಸುವ ನಿಟ್ಟಿನಲ್ಲಿ ಬದ್ಧತೆ ಹೊಂದಿದೆ. ನೀರುರಹಿತ ಕಾರು ಸ್ವಚ್ಚತೆ ಗ್ರಾಹಕರಿಗೆ ನೀರು ಹಾಗೂ ಸಮಯ ಉಳಿಸಿ, ಪರಿಸರ ಸಂರಕ್ಷಿಸಲು ನೆರವಾಗುತ್ತದೆ.

ಓಟೋಕೇರ್‍ನ ವ್ಯವಸ್ಥಾಪಕ ನಿರ್ದೇಶಕ ಜಿ.ಕೃಷ್ಣ ಕುಮಾರ್ ಮಾತನಾಡಿ, “ಆಟೋ ಕೇರ್‍ನ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಂತಸವಾಗುತ್ತಿದೆ. ಓಟೋಕೇರ್ ಸುಸ್ಥಿರ ಪರಿಸರದ ಜವಾಬ್ದಾರಿ ಹೊಂದಿದ್ದು, ನಮ್ಮ ಹೊಸ ಉತ್ಪನ್ನಗಳು ಅದೇ ಹಾದಿಯಲ್ಲಿವೆ. ಜೈವಿಕ ವಿಘಟನೆಯ ರಾಸಾಯನಿಕಗಳನ್ನು ಬಳಸಿ ತಯಾರಾದ ಉತ್ಪನ್ನಗಳಲ್ಲಿ ಪರಿಸರಕ್ಕೆ ಹಾನಿ ಉಂಟು ಮಾಡಬಲ್ಲ ಯಾವುದೇ ವಿಷಕಾರಿ ರಾಸಾಯನಿಕಗಳಿಲ್ಲ” ಎಂದು ಅಭಿಪ್ರಾಯಪಟ್ಟರು. ಜೊತೆಗೆ, ಜನರ ಕೈಗೆಟಕುವ ದರದಲ್ಲಿ ದೊರಕುವಂತಿದ್ದು, ಗುಣಮಟ್ಟ ಹಾಗೂ ಉಪಯುಕ್ತತೆಯಲ್ಲಿ ಶ್ರೇಷ್ಠತೆ ಹೊಂದಿದೆ ಎಂದರು.

ಓಟೋಕೇರ್ ನಾಲ್ಕು ಚಕ್ರ ಹಾಗೂ ದ್ವಿಚಕ್ರ ವಾಹನಗಳ ಸಂರಕ್ಷಣೆ ಹಾಗೂ ಸ್ವಚ್ಚತೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ಇದು ಒನ್ ಸ್ಟಾಪ್ ಪರಿಹಾರವಾಗಲಿದೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ