ಸಿದ್ದರಾಮಯ್ಯ ಸೇರಿದಂತೆ ಜೆಡಿಎಸ್ ವಿರೋಧಿ ಬಣಗಳ ಬಾಯಿಗೆ ಹೈಕಮಾಂಡ್ ಬೀಗ

 

ಬೆಂಗಳೂರು,ಜೂ.27- ಸರ್ಕಾರದ ವಿರುದ್ಧ ನಿರಂತರ ಹೇಳಿಕೆ ನೀಡಿ ಮುಜುಗರ ಸೃಷ್ಟಿಸುತ್ತಿರುವ ಸಮನ್ವÀಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಜೆಡಿಎಸ್ ವಿರೋಧಿ ಬಣಗಳ ಬಾಯಿಗೆ ಹೈಕಮಾಂಡ್ ಬೀಗ ಹಾಕಿದೆ.
ಯಾವುದೇ ಕಾರಣಕ್ಕೂ ಸರ್ಕಾರ ಹಾಗೂ ಪಕ್ಷದ ಪ್ರಮುಖ ತೀರ್ಮಾನಗಳ ವಿರುದ್ದ ಯಾವೊಬ್ಬ ನಾಯಕರು ಬಹಿರಂಗ ಹೇಳಿಕೆ ನೀಡಿ ಮುಜುಗರ ಸೃಷ್ಟಿಸಬಾರದು ಎಂದು ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಟ್ಟಪ್ಪಣೆ ವಿಧಿಸಿದ್ದಾರೆ.
ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮೂಲಕ ಈ ಕಟು ಸಂದೇಶವನ್ನು ರವಾನಿಸಿರುವ ರಾಹುಲ್ ಗಾಂಧಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷದ ವೇದಿಕೆಯೊಳಗೆ ಚರ್ಚಿಸಬೇಕೆ ವಿನಃ ಬಹಿರಂಗವಾಗಿ ಹೇಳಿಕೆ ನೀಡಬಾರದು. ಪಕ್ಷದ ಶಿಸ್ತಿಗೆ ಎಲ್ಲರೂ ಕಟಿಬದ್ಧರಾಗಬೇಕೆಂದು ಸೂಚ£ಯನ್ನು ನೀಡಿದ್ದಾರೆ.

ಈ ಹೇಳಿPಯನ್ನು ಪುಷ್ಟೀಕರಿಸುವಂತೆ ಮಾತನಾಡಿರುವ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಾ.ಜಿ.ಪರಮೇಶ್ವರ್ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ರೀತಿಯ ಧಕ್ಕೆ ಇಲ್ಲ. ಐದು ವರ್ಷ ನಾವು ಸರ್ಕಾರವನ್ನು ನಡೆಸುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಗಾಯಗೊಂಡ ಹುಲಿಯಂತಾಗಿರುವ ಸಿದ್ದರಾಮಯ್ಯನವರು ಧರ್ಮಸ್ಥಳ ಸಮೀಪದ ಉಜಿgಯಲ್ಲಿರುವ ಪ್ರಕೃತಿ ಚಿಕಿತ್ಸಾಲಯದಲ್ಲಿ ತಮ್ಮ ಆಪ್ತ ಬೆಂಬಲಿಗರ ಜೊತೆ ಬುಧವಾರವೂ ಸಭೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಸಿದ್ದುಗೆ ಕಡಿವಾಣ ಹಾಕಿ:

ಕಳೆದ ನಾಲ್ಕೈದು ದಿನಗಳಿಂದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೀಡುತ್ತಿರುವ ಹೇಳಿಕೆಯಿಂದ ಮುಜುಗರಕ್ಕೆ ಸಿಲುಕಿರುವ ಕಾಂಗ್ರೆಸ್‍ನ ಕೆಲವು ಸಿದ್ದರಾಮಯ್ಯವಿರೋಧಿ ಬಣದವರು ಅಖಾಡಕ್ಕಿಳಿದಿದ್ದಾರೆ.
ತಕ್ಷಣವೇ ಕೇಂದ್ರ ನಾಯಕರು ಮಧ್ಯಪ್ರವೇಶಿಸಬೇಕು. ಸಿದ್ದರಾಮಯ್ಯನವರ ಮಾತಿಗೆ ಕಡಿವಾಣ ಹಾಕದಿದ್ದರೆ ಸರ್ಕಾರ ಸುಭದ್ರವಾಗಿ ಮುನ್ನqಯುವುದಿಲ್ಲ.ಇದರಿಂದ ಬರಲಿರುವ ಲೋಕಸಭೆ ಚುನಾವuಯಲ್ಲಿ ಬಿಜೆಪಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಒಂದು ಹಣ ಹೈಕಮಾಂಡ್‍ಗೆ ದೂರು ನೀಡಿದೆ.

ಇನ್ನು ಮುಂದೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡಿದರೆ ನಾವು ಕೂಡ ಎದುರೇಟು ನೀಡಬೇಕಾಗುತ್ತದೆ ಎಂದು ಕೆಲವರು ಬಹಿರಂಗವಾಗಿಯೇ ಸಿಡಿದೆದ್ದಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ರಾಹುಲ್ ಗಾಂಧಿ ಎಲ್ಲರ ಆಟೋಟೊಪಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ