ಬಳ್ಳಾರಿ, ಜೂ.27- ಜಿಲ್ಲೆಯ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂರು ಕಾಲು ಹೊಂದಿರುವ ಅಪರೂಪದ ಗಂಡು ಮಗು ಜನಿಸಿದೆ. ಕಳೆದ ರಾತ್ರಿ ಹೆರಿಗೆಗಾಗಿ ದಾಖಲಾಗಿದ್ದ ಸುಷ್ಮಾ ಎಂಬ ಮಹಿಳೆಗೆ ಗಂಡು ಮಗು ಜನಿಸಿದ್ದು, 3 ಕೆಜಿ ತೂಕದ ಮಗು ಆರೋಗ್ಯವಾಗಿದೆ. ಬಲಗಾಲಿನ ಪಕ್ಕದಲ್ಲಿ ಮತ್ತೊಂದು ಕಾಲು ಇದ್ದು, ಅದಕ್ಕೆ ಎರಡು ಪಾದಗಳಿವೆ. ಗರ್ಭಾವಸ್ಥೆಯಲ್ಲಿ ಕೆಲವು ಚಿಕಿತ್ಸೆ ಪqಯದಿರುವುದು ಹಾಗೂ ಸಂಬಂಧಿಕರನ್ನೇ ವಿವಾಹವಾಗುವುದರಿಂದ ಇಂತಹ ನೂನ್ಯvಯ ಶಿಶುಗಳು ಜನಿಸುತ್ತವೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಈಗ ಬಲಗಾಲಿನಲ್ಲಿ ಬೆಳೆದಿರುವ ಹೆಚ್ಚುವರಿ ಕಾಲನ್ನು ಶಸ್ತ್ರಚಿಕಿತ್ಸೆ ಮಾಡಿ ಬೇರ್ಪಡಿಸಲು ನಿರ್ಧರಿಸಿದ್ದೇವೆ. ಆದರೆ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಪೆÇೀಷಕರು ಹಾಗೂ ಹಿರಿಯ ಆರೋಗ್ಯ ಅಧಿಕಾರಿಗಳ ಅನುಮತಿ ಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ.