ಟವೇರಾ ವಾಹನಕ್ಕೆ ಲಾರಿ ಡಿಕ್ಕಿ, ಇಬ್ಬರ ಸಾವು

ಮಂಡ್ಯ,ಜೂ.27- ಬೆಂಗಳೂರುನಿಂದ ಮೈಸೂರಗೆ ತೆರಳುತ್ತಿದ್ದ ಟವೇರಾ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ
ಮೃತರನ್ನು ಸದ್ದಾಂ ಮತ್ತು ಫರ್ವೇಜ್ ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ಟವೇರಾ ವಾಹನದಲ್ಲಿ ಸದ್ದಾಂ, ಫರ್ವೇಜ್ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದರು.
ಮಂಡ್ಯ ಹೊರವಲಯದ ಎಲಿಯೂರು ಬಳಿ ಓವರ್ ಟೇಕ್ ಮಾಡುವ ಭರದದಲ್ಲಿ ಟವೇರಾ ವಾಹನ ಮುನ್ನುಗ್ಗಿದ್ದಾಗ ಲಾರಿ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಸುದ್ದಿ ತಿಳಿದು ಗ್ರಾಮಾಂತರ ಠಾಣೆ ಪಿಎಸ್‍ಐ ಅಜುರುದ್ದೀನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಮತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ