ನಗರದಲ್ಲಿ ದ್ವಿಚಕ್ರ ವಾಹನ ಕಳ್ಳತನ ಕಡಿಮೆಯಾಗಿದೆ – ಪೆÇಲೀಸ್ ಆಯುಕ್ತ

ಮೈಸೂರು, ಜೂ.27- ನಗರದಲ್ಲಿ ದ್ವಿಚಕ್ರ ವಾಹನ ಕಳ್ಳತನ ಕಡಿಮೆಯಾಗಿದೆ ಎಂದು ಪೆÇಲೀಸ್ ಆಯುಕ್ತ ಡಾ.ಸುಬ್ರಮಣ್ಯೇಶ್ವರರಾವ್ ತಿಳಿಸಿದ್ದಾರೆ.
ದ್ವಿಚಕ್ರ ವಾಹನಗಳ ಕಳ್ಳತನ ಹೆಚ್ಚಾಗಿದೆ ಎಂಬ ವರದಿ ಮಾಧ್ಯಮಗಳಲ್ಲಿ ಬಂದ ಹಿನ್ನೆ¯ಯಲ್ಲಿ ಅವರು ಮಾಹಿತಿ ನೀಡಿ ವಾಹನಗಳ ಕಳ್ಳತನ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
2013ರಲ್ಲಿ 378, 2014ರಲ್ಲಿ 334 ದ್ವಿಚಕ್ರವಾಹನ ಕಳ್ಳತನ ನಡೆದಿತ್ತು. 2015ರಲ್ಲಿ 340, 2016ರಲ್ಲಿ 414, 2017ರಲ್ಲಿ 305 ಹಾಗೂ 2018ರ ಜೂನ್‍ವರೆಗೆ 118 ವಾಹನಗಳ ಕಳ್ಳತನ ಪ್ರಕರಣ ನಡೆದಿದೆ ಎಂದು ತಿಳಿಸಿದ್ದಾರೆ. ದ್ವಿಚಕ್ರವಾಹನ ಕಳ್ಳತನ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಪರೇಷನ್ ಚೀತಾ ಕಾರ್ಯಾಚರuಯಲ್ಲಿದೆ. ಕೆಲವೆಡೆ ಮಫ್ತಿಯಲ್ಲಿ ಪೆÇಲೀಸರು ಅಡ್ಡಾಡಿ ಕಳ್ಳತನ ಮಾಡುವವರನ್ನು ಹಿಡಿದಿದ್ದಾರೆ. ಲಾಕ್ ಮಾಡದೆ ಪಾರ್ಕಿಂಗ್ ಮಾಡಿರುವ ವಾಹನಗಳನ್ನು ವಶಕ್ಕೆ ಪಡೆದು ನಂತರ ಅದರ ಮಾಲೀಕರಿಗೆ ತಿಳುವಳಿಕೆ ನೀಡಿ ಕೊಡಲಾಗುತ್ತಿದೆ. ಒಟ್ಟಾರೆ ದ್ವಿಚಕ್ರವಾಹನ ಕಳ್ಳತನ ನಗರದಲ್ಲಿ ಕಡಿಮೆಯಾಗಿದೆ ಎಂದು ಸುಬ್ರಹ್ಮಣ್ಯೇಶ್ವರರಾವ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ