ಮಾಸ್ಕೋ: ಫುಟ್ಬಾಲ್ ನಲ್ಲಿ ಗೋಲ್ ಕೀಪರ್ ಕೈಯಲ್ಲಿರುವ ಚೆಂಡನ್ನು ಕಸಿಯುವುದು ನಿಯಮ ಬಾಹಿರವೇ ಅಥವಾ ಇದೂ ಕ್ರೀಡೆಯ ಒಂದು ಭಾಗವೇ…!
ಜಗತ್ತಿನ ಅತೀ ಹೆಚ್ಚಿನ ದೇಶಗಳು ಪಾಲ್ಗೊಳ್ಳುವ ಮತ್ತು ಅತೀ ಹೆ್ಚು ಜನಪ್ರಿಯ ಕ್ರೀಡೆ ಫುಟ್ಬಾಲ್. ಕ್ರಿಕೆಟ್ ಅನ್ನೇ ಒಂದು ಧರ್ಮವಾಗಿ ಪರಿಗಣಿಸುವ ಭಾರತದಂತಹ ರಾಷ್ಟ್ರಗಳಲ್ಲಿ ಫುಟ್ಬಾಲ್ ನ ನಿಯಮಗಳು ಅಪರಿಚಿತ. ಹೀಗಾಗಿ ಭಾರತದಲ್ಲಿ ಫುಟ್ಬಾಲ್ ಭಾರಿ ಜನಪ್ರಿಯತೆ ಗಳಿಸಿಲ್ಲ.
ಇಂತಹ ಫುಟ್ಬಾಲ್ ಕ್ರೀಡೆಯಲ್ಲಿ ನಡೆಯುವ ಕೆಲ ಘಟನೆಗಳು ಇದೂ ಕೂಡ ಕ್ರೀಡೆಯ ಭಾಗವೇ ಎಂಬ ಪ್ರಶ್ನೆ ಮೂಡಿಸುತ್ತದೆ. ಈ ಪೈಕಿ ಗೋಲ್ ಕೀಪರ್ ಕೈಯಿಂದ ಚೆಂಡನ್ನು ಕಸಿಯುವುದು. ಈ ಬಗ್ಗೆ ಫುಟ್ಬಾಲ್ ನಿಯಮಗಳಲ್ಲಿ ನಿಖರ ಮಾಹಿತಿ ಇಲ್ಲವಾದರೂ ಕೆಲ ನಿಯಮಗಳು ಈ ಪೈಕಿ ಬೆಳಕು ಚೆಲ್ಲುತ್ತದೆ. ಇದೇ ವಿಚಾರಕ್ಕೆ ಸಂಬಂದಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗಳಾಗುತ್ತಿವೆ.
ಇಷ್ಟಕ್ಕೂ ಗೋಲ್ ಕೀಪರ್ ಕೈಯಿಂದ ಆಟಗಾರರು ಕಸಿಯುವುದು ಕಾನೂನು ಬಾಹಿರವೇ ಎಂಬ ಪ್ರಶ್ನೆಗೆ ಉತ್ತರ.. ಅದು ತಪ್ಪು, ಫುಟ್ಬಾಲ್ ನಿಯಮಗಳ ಪ್ರಕಾರ ಎದುರಾಳಿ ಆಟಗಾರ ಗೋಲ್ ಕೀಪರ್ ಕೈಯಿಂದ ಬಾಲ್ ಕಸಿದರೆ ಅದು ಅಪರಾಧವಾಗುತ್ತದೆ. ಹೀಗಾಗಿ ರೆಫರಿ ಎದುರಾಳಿ ತಂಡಕ್ಕೆ ಫ್ರೀಕಿಕ್ ಮಾಡುವ ಅವಕಾಶ ನೀಡಬಹುದು.
ಆದರೆ ಇಲ್ಲಿ ಒಂದು ಟ್ವಿಸ್ಟ್ ಇದ್ದು, ಅದೇನೆಂದರೆ ಗೋಲ್ ಕೀಪರ್ ಕೈಯಿಂದ ಚೆಂಡನ್ನು ಕಸಿಯಬಾರದು. ಆದರೆ ಚೆಂಡು ಗೋಲ್ ಕೀಪರ್ ಕೈಯಿಂದ ಹೊರಗೆ ಬರುತ್ತಿದ್ದಂತೆಯೇ ಆಟಗಾರರು ಚೆಂಡು ಕಸಿಯುವ ಪ್ರಯತ್ನ ಮಾಡುತ್ತಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಕೂಡ ಆಗಿತ್ತು. ಲಿಯೋನಲ್ ಮೆಸ್ಸಿರಂತಹ ಫುಟ್ಭಾಲ್ ಕ್ಷೇತ್ರದ ಖ್ಯಾತನಾಮ ಆಟಗಾರರೇ ಗೋಲ್ ಕೀಪರ್ ಕೈಯಿಂದ ಚೆಂಡನ್ನು ಕಸಿಯುವ ಪ್ರಯತ್ನ ಮಾಡಿದ್ದರು. ಈ ಬಗ್ಗೆ ಪರ ವಿರೋದ ವಾದಗಳಿದ್ದು, ಚೆಂಡು ಗೋಲ್ ಕೀಪರ್ ಕೈಯಿಂದ ಬಿಡುಗಡೆಯಾದ ಬಳಿಕ ಆಟಗಾರರು ಅದನ್ನು ಹಿಡಿತಕ್ಕೆ ಪಡೆಯುವ ಪ್ರಯತ್ನ ಮಾಡಬಹುದು ಎಂದು ಕೆಲವರು ವಾದಿಸಿದ್ದರೆ, ಮತ್ತೆ ಕೆಲವರು ಇಲ್ಲ ಗೋಲ್ ಕೀಪರ್ ಕೈಯಿಂದ ಚೆಂಡು ಬಿಡುಗಡೆಯಾದ ಕೆಲ ಸೆಕೆಂಡ್ ಗಳ ಬಳಿಕ ಆಟಗಾರರು ಅದನ್ನು ಹಿಡಿತಕ್ಕೆ ಪಡೆಯುವ ಪ್ರಯತ್ನ ಮಾಡಬಹುದು ಎಂದು ವಾದಿಸಿದ್ದಾರೆ.