ಸಾಂಸ್ಕೃತಿಕ ರಾಯಬಾರಿ ದಿ|| ವಿ.ಯು ಪಟಗಾರರಿಗೆ ಅರ್ಥಪೂರ್ಣ ನುಡಿನಮನ ಹಾಗೂ ‘ನಾದನಮನ’

 

ಶಿರಸಿ :

ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ, ಭಾರತೀಯ ಸಂಗೀತ ಪರಿಷತ್ನ ಗೌರವಾಧ್ಯಕ್ಷರು, ಮಾರಿಕಾಂಬಾ ದೇವಾಲಯದ ಧರ್ಮದರ್ಶಿಗಳೂ ಆಗಿದ್ದ, ಖ್ಯಾತ ಸಂಗೀತ ಪ್ರೇಮಿ ದಿ|| ವಿ.ಯು ಪಟಗಾರರ ಪ್ರಥಮ ಪುಣ್ಯಸ್ಮರಣೆಯ ನಿಮಿತ್ತ ಅವರ ಕುಟುಂಬದವರು ಹಾಗೂ ಸಂಗೀತ ಅಭಿಮಾನಿಗಳ ಸಮ್ಮಿಲನದಲ್ಲಿ ನಾದ ನಮನ ಹಾಗೂ ನುಡಿನಮನ ಕಾರ್ಯಕ್ರಮವನ್ನು ಹೊಟೆಲ್ ಪಂಚವಟಿ ಸಭಾ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಖ್ಯಾತ ಕಲಾವಿದ ಎಂ.ಪಿ. ಹೆಗಡೆ, ಪಡಿಗೇರಿ ಹಾಗೂ ಮಾರಿಕಾಂಬಾ ದೇವಾಲಯದ ಮಾಜಿ ಅಧ್ಯಕ್ಷರಾದ ಆರ್. ಎಂ. ಹೆಗಡೆ ಯಡಳ್ಳಿ ಅವರು ಸಾಂಸ್ಕೃತಿಕ ರಾಯಬಾರಿಯಾಗಿದ್ದ ದಿ|| ಪಟಗಾರರ ಕಲಾಸೇವೆಯ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಆಡುತ್ತಾ ದಿ|| ವಿ.ಯು ಪಟಗಾರರಿಗೆ ತಮ್ಮ ನುಡಿನಮನವನ್ನು ಸಲ್ಲಿಸಿದರು.

ನಾದ ನಮನ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಡಾ|| ಕೃಷ್ಣಮೂರ್ತಿ ಭಟ್ಟ ಬೊಮ್ನಳ್ಳಿ ಹಾಗೂ ಮೈಸೂರಿನ ಖ್ಯಾತ ಗಾಯಕ ಪದ್ಮಶ್ರೀ ಪಂ|| ವೆಂಕಟೇಶ ಕುಮಾರ್ ಅವರ ಶಿಷ್ಯ , ರಮೇಶ ಕೊಲಕುಂದ ಅವರ ಗಾಯನ ಕಾರ್ಯಕ್ರಮ ಕಾರ್ಯಕ್ರಮಕ್ಕೆ ಕಳೆಕಟ್ಟಿತ್ತು. ರಮೇಶ ಕೊಲಕುಂದ ಅವರು ರಾಗ ಮಿಯಾಮಲ್ಲಾರ್, ದುಗರ್ಾ, ಹಾಗೂ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಖ್ಯಾತಗಾಯಕ ಡಾ|| ಕೃಷ್ಣಮೂರ್ತಿ ಭಟ್ಟರು ಸಂದಿಪ್ರಕಾಶ ರಾಗ ಪೂರಿಯಾ ಹಾಗೂ ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸಿ ಭೈರವಿಯೊಂದಿಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ವಿದ್ವಾನ್ ಪ್ರಕಾಶ ಹೆಗಡೆ, ಯಡಳ್ಳಿ, ಸಂವಾದಿನಿಯಲ್ಲಿ ಹಾಗೂ ಯಲ್ಲಾಪುರದ ಖ್ಯಾತ ಯುವ ತಬಲವಾದಕ ಗಣೇಶ ಗುಂಟ್ಕಲ್ ಅವರು ತಬ್ಲಾದಲ್ಲಿ ಸಹಕರಿಸಿದರು. ಕು|| ಕಾವ್ಯಾ , ಸುಪ್ರಿಯಾ, ತಂಬೂರಾದಲ್ಲಿ ಸಹಕರಿಸಿದರು.

ಜಿಲ್ಲಾ ಉಪಯೋಜನಾ ಸಮನ್ವಯಾದಿಕಾರಿಗಳಾದ ಶ್ರೀ ವೆಂಕಟೇಶ ಪಟಗಾರ, ಸಂಘಟಕರಾದ ಶ್ರೀಮತಿ ದುರ್ಗಿ ಪಟಗಾರ, ಗಜಾನನ ಪಟಗಾರ ಹಾಗೂ ಕುಟುಂಬದವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದರು.

ಆರ್. ಎಸ್. ಹೆಗಡೆ ಬೆಳ್ಳೆಕೇರಿ, ಪಂ|| ಆರ್. ವಿ. ಹೆಗಡೆ ಹಳ್ಳದಕೈ , ವತ್ಸಲಾ ಮಾಪಾರಿ, ವಿಠಲ್ದಾಸ್ ಕಾಣೇಕರ ಮಾರಿಕಾಂಬಾ ದೇವಾಲಯದ ಧರ್ಮದರ್ಶಿ ಶಾಂತಾರಾಮ ಹೆಗಡೆ ಕಲಾವಿಧರಾದ ರಾಜು ಹೆಗ್ಗಾರ್, ಶ್ರೀ ನರಸಿಂಹ ಹೆಗಡೆ, ಪ್ರೊ|| ನರಸಿಂಹಮೂರ್ತಿ, ಸೇರಿದಂತೆ ಅನೇಕ ಜನರು ಉಪಸ್ಥಿತರಿದ್ದರು. ಶ್ರೀ ಪರಮೇಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ