ಲಿಯೋನಲ್ ಮೆಸ್ಸಿ ಸಾರಥ್ಯದ ಅರ್ಜೇಂಟಿನಾಗೆ ಇಂದು ಮಾಡು ಇಲ್ಲವೆ ಮಡಿ ಪಂದ್ಯ!

ಸೇಂಟ್ ಪೀಟರ್ಸ್ ಬರ್ಗ್: ಅರ್ಜೇಂಟಿನಾದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಬಹುಶಃ ಇದು ಕೊನೆಯ ವಿಶ್ವಕಪ್. ವೃತ್ತಿಬದುಕಿನಲ್ಲಿ ಒಮ್ಮೆಯಾದರೂ ವಿಶ್ವಕಪ್ ಗೆಲ್ಲಬೇಕೆಂಬ ಕನಸು ಹೊತ್ತಿರುವ ಮೆಸ್ಸಿ ಸಾರಥ್ಯದ ಹಾಲಿ ರನ್ನರ್ ಅಪ್ ಅರ್ಜೇಂಟೀನಾ ತಂಡದ ವಿಶ್ವಕಪ್ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಪಶ್ಚಿಮ ಆಫ್ರಿಕಾದ ನೈಜೀರಿಯಾ ವಿರುದ್ಧ ಮೆಸ್ಸಿ ಪಡೆ ಮಾಡು ಇಲ್ಲವೆ ಮಡಿ ಹೋರಾಟ ನಡೆಸಲಿದೆ. ಸೋತರೆ ಅಥವಾ ಡ್ರಾ ಸಾಧಿಸಿದರೂ 2002ರ ನಂತರ ಮೊದಲ ಬಾರಿ ಲೀಗ್ ಹಂತದಲ್ಲೇ ನಿರ್ಗಮಿಸಿದ ಅಪಖ್ಯಾತಿಗೆ ಒಳಗಾಗಲಿದೆ.
ಪಂದ್ಯಾವಳಿಯ ಡಿ ಗುಂಪಿನಲ್ಲಿ ನಾಕೌಟ್ ಹೋರಾಟಕ್ಕೆ ಕ್ರಮವಾಗಿ 2,3 ಮತ್ತು 4ನೇ ಸ್ಥಾನದಲ್ಲಿರುವ ತಂಡಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಅಗ್ರಸ್ಥಾನಿ ಕ್ರೊವೇಷಿಯಾ(6 ಅಂಕ) ಈಗಾಗಲೇ ನಾಕೌಟ್ ಸ್ಥಾನ ಖಚಿತಪಡಿಸಿಕೊಂಡರೆ, ನೈಜೀರಿಯಾ(3), ಐಸ್ಲೆಂಡ್(1) ಮತ್ತು ಅರ್ಜೇಂಟೀನಾ(1) ತಂಡಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಈ ಮೂರು ತಂಡಗಳ ಪೈಕಿ 1 ತಂಡ ಮಾತ್ರ ನಾಕೌಟ್ ಗೇರಲಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ