ಮೈಸೂರು:ಜೂ-25: ಯುವತಿ ಜೊತೆ ಯುವಕರಿಬ್ಬರ ಅಸಭ್ಯ ವರ್ತನೆ ಹಿನ್ನೆಲೆಯಲ್ಲಿ ಇದನ್ನು ಪ್ರಶ್ನಿಸಿದ್ದಕ್ಕೆ ಯುವತಿಗೆ ಯುವಕನೊಬ್ಬ ಚಾಕುವಿನಿಂದ ಇರಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಜಯಲಕ್ಷ್ಮಿಪುರಂನ ಪಂಚವಟಿ ಬಳಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಹಾಲಕ್ಷ್ಮಿ ಎಂಬ ಯುವತಿ ಯುವಕರಿಂದ ಚಾಕು ಇರಿತಕ್ಕೆ ಒಳಗಾಗಿರುವವರು.
ಹಳೆ ವೈಷಮ್ಯದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿ ಪಬ್ ಗೆ ಹೋಗಿದ್ದ ವೇಳೆ ಉಮೇಶ್ ಹಾಗೂ ವಿವೇಕ್ ಎಂಬ ಯುವಕರು ಯುವತಿಗೆ ಕಿರುಕುಳ ನೀಡಿದ್ದಾರೆ. ಅಲ್ಲದೇ ಅಸಭ್ಯವಾಗಿ ವರ್ತಿಸಿದ್ದಾರೆ. ಯುವತಿಯ ಕುತ್ತಿಗೆಗೆ ಕೈ ಹಾಕಿ ಬಟ್ಟೆ ಹರಿದು ಹಾಕಿದ್ದಾರೆ. ಇದನ್ನು ವಿರೋಧಿಸಿದ ಯುವತಿಗೆ ಚಾಕುವಿನಿಂದ ಕೈಗೆ ಇರಿದಿದ್ದಾರೆ.
ಈ ಬಗ್ಗೆ ಸ್ವತ: ಯುವತಿ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಗಳಾದ ಉಮೇಶ್ ಹಾಗೂ ವಿವೇಕ್ ವಿರುದ್ಧ
ಎಫ್ಐಆರ್ ದಾಖಲಾಗಿದೆ.
Mysore, knife stab,Girl