ಹರಾರೆ: ಬುಲಾವಾಯೋದಲ್ಲಿ ಜಿಂಬಾಬ್ವೆ ಅಧ್ಯಕ್ಷರ ನೇತೃತ್ವದ ನಡೆಯುತ್ತಿದ್ದ ರ‍್ಯಾಲಿ ಮೇಲೆ ಬಾಂಬ್ ದಾಳಿ ನಡೆದಿದ್ದು, ಉಪ ರಾಷ್ಟ್ರಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಲ್ಲಿನ ವೈಟ್ ಸಿಟಿ ಮೈದಾನದಲ್ಲಿ ರ‍್ಯಾಲಿ ನಡೆಯುತ್ತಿದ್ದು, ಈ ಜಾಥಾದಲ್ಲಿ ಜಿಂಬಾಬ್ವೆ ರಾಷ್ಟ್ರಪತಿ ಎಮ್ಮರ್ಸನ್ ಭಾಗಿಯಾಗಿದ್ದರು. ಜನರನ್ನುದ್ದೇಶಿ ಮಾತನಾಡಿದ ಬಳಿಕ ಎಮ್ಮರ್ಸನ್ ಕಾರ್ಯಕರ್ತರ ಬಳಿ ತೆರಳಿದರು. ಬಳಿಕ ವೇದಿಕೆ ಮೇಲೆ ಬಾಂಬ್ ದಾಳಿ ನಡೆದಿದೆ.
ಬಾಂಬ್ ದಾಳಿಯಲ್ಲಿ ಉಪರಾಷ್ಟ್ರಪತಿ ಕೆಂಬೋ ಮೊಹಾಡಿ ಅವರ ಕಾಲಿಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳುತ್ತಿದ್ದಾರೆ. ಇನ್ನು ಈ ಘಟನೆಯಲ್ಲಿ 8-9 ಜನರ ಗಾಯಗೊಂಡಿದ್ದು, ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಬಾಂಬ್ ದಾಳಿಯಲ್ಲಿ ಜಿಂಬಾಬ್ವೆಯ ಮೊದಲ ಉಪರಾಷ್ಟ್ರಪತಿಯ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಉಪರಾಷ್ಟ್ರಪತಿಯ ಪತ್ನಿ ಗಾಯಗೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.