ಹಿಂದೂ ಧರ್ಮಕ್ಕೆ ಮನಸೋತ ಮುಸ್ಲಿಂ ದಂಪತಿ; 12 ಜ್ಯೋತಿರ್ಲಿಂಗದ ದರ್ಶನ ಪಡೆದ ಜೋಡಿ!

ಅಲ್ಮೋಡಾ: ದೆಹಲಿಯ ಮುಸ್ಲಿಂ ದಂಪತಿ ಭಾವೈಕತೆಯ ಬಿಂದು ಆಗಿದ್ದಾರೆ. ಈ ದಂಪತಿ ಹಿಂದೂ ಧರ್ಮಕ್ಕೆ ಮನಸೋತಿದ್ದಾರೆ. ಹಿಂದೂಗಳ ಪವಿತ್ರ 12 ಜ್ಯೋತಿರ್ಲಿಂಗ ದರ್ಶನವನ್ನು ಪಡೆದು ಪಾವನರಾಗಿದ್ದಾರೆ.
ಹೌದು, ಶನಿವಾರ ಉತ್ತರಾಖಂಡದ ವಿಶ್ವ ಪ್ರಸಿದ್ಧ ಶ್ರೀ ಜ್ಯೋತಿರ್ಲಿಂಗ ಜಾಗೇಶ್ವರ ಧಾಮದಲ್ಲಿ ವಿಧಿ ವಿಧಾನಗಳ ಮೂಲಕ ಪೂಜೆ-ಅರ್ಚನೆ ಮಾಡಿಸಿ ಇವರು ಆಶೀರ್ವಾದ ಪಡೆದರು. ರುದ್ರಾಭಿಷೇಕ, ಪೂಜೆ, ಹವನ ಮಾಡಿಸಿ ದೇಶದಲ್ಲಿರುವ ಎಲ್ಲಾ ಧರ್ಮಗಳು ಒಂದೇ ಎಂಬ ಸಂದೇಶ ಸಾರಿದರು. ಭಗವಾನ್‌ ಭೋಲೆನಾಥನ ಮೇಲಿರುವ ಮುಸ್ಲಿಂ ದಂಪತಿಯ ಭಕ್ತಿ ನೋಡಿ ದೇವಾಲಯದ ಪೂಜಾರಿ ಮತ್ತು ಅಲ್ಲಿ ನೆರೆದಿದ್ದ ಜನರು ಅಚ್ಚರಿಗೊಂಡರು.
ಬೆಳಗ್ಗೆ 8 ಗಂಟೆಗೆ ಜಾಗೇಶ್ವರ್‌ ಧಾಮಕ್ಕೆ ಮುಖ್ತಾರ್‌ ಅಲಿ ದಂಪತಿ ತಮ್ಮ ಪುತ್ರ ಜಮಾವುದ್ದಿನ್‌ ಜೊತೆ ಆಗಮಿಸಿ ದೇವರಿಗೆ ರುದ್ರಾಭಿಷೇಕ ಮಾಡಿಸುವಂತೆ ಹೇಳಿದ್ದಾರೆ. ಇದನ್ನು ಕೇಳಿದ ಪೂಜಾರಿ ಆಶ್ಚರ್ಯಚಕಿತರಾಗಿದ್ದರು.  ಪೂಜೆ ನಂತರ ಮುಖ್ತಾರ್‌ ಅಲಿ ದಂಪತಿಗೆ ಜಾಗೇಶ್ವರ್‌ ಮಹಾತ್ಮೆಯ ಪುಸ್ತಕ, ರುದ್ರಾಕ್ಷಿ ಮಾಲೆಯನ್ನು ವಿತರಿಸಿದರು.
ನಾನು ಭಗವಾನ್‌ ಬೋಲೆನಾಥನ ಭಕ್ತ. ದೇಶದ ಪ್ರಸಿದ್ಧ 12 ಜ್ಯೋತಿರ್ಲಿಂಗ ದರ್ಶನವನ್ನು ಪಡೆದಿದ್ದೇನೆ. ನಾನು ಇನ್ಮುಂದೆ ಪ್ರತಿವರ್ಷ ಜಾಗೇಶ್ವರ ಧಾಮಕ್ಕೆ ಭೇಟಿ ನೀಡಿ ಭಗವಾನ್‌ ಭೋಲೆನಾಥನಿಗೆ ಅಭಿಷೇಕ ಮಾಡಿಸುತ್ತೇನೆ ಎಂದು ದೆಹಲಿಯ ಪತ್ರಕರ್ತ ಮುಖ್ತಾರ್‌ ಅಲಿ ಹೇಳಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ